Aata – Pata camp report – Brindavan school
Thursday, February 2nd, 2012
ಬೃಂದಾವನ ಶಾಲೆಯಲ್ಲಿ ನಡೆದ ಆಟ – ಪಾಠ ಶಿಬಿರದ ಸಮಾರೋಪ ಸಮಾರಂಭದ ವರದಿ
ಅದಮ್ಯ ಚೇತನ ಸಂಸ್ಥೆ ಕಳೆದ ಹಲವಾರು ವವರ್ಷ ಗಳಿಂದ ಅನ್ನ ಅಕ್ಷರ ಆರೋಗ್ಯ ಕ್ಷೇತ್ರದಲ್ಲಿ ವಿವಿಧ ಪ್ರಕಲ್ಪಗಳ ಮೂಲಕ ಅನೇಕ ಸಾಮಾಜಿಕ ಸೇವೆಯನ್ನು ಮಾಡುತ್ತಾ ಬಂದಿದೆ. ಪ್ರತಿದಿನ 320 ಶಾಲೆಗಳ ಸುಮಾರು 70,000 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸುವ ಬೃಹತ್ ಕಾರ್ಯವನ್ನು ಮಾಡುತ್ತಿದೆ. ದಿನಾಂಕ 18.1.12 ರಿಂದ 20.1.12ರವರೆಗೆ 3 ದಿನಗಳ ಆಟ – ಪಾಠ ಶಿಬಿರವನ್ನು ಬೃಂದಾವನ ಹಿರಿಯ ಪ್ರಾಥಮಿಕ ಶಾಲೆ, ಬೃಂದಾವನನಗರ, [...]









