Chinnara Chetana
ಚಿಣ್ಣರ ಚೇತನ
Chinnara Chetana:
Conceptualized in 2008, this colourful monthly wall magazine for school children carries thought provoking and informative articles related to environment, green lifestyle, etc. Published in both Kannada and English, it adorns the walls of hundreds of schools in Karnataka.
ಚಿಣ್ಣರ ಚೇತನ ಗೋಡೆ ಪತ್ರಿಕೆ :
ಶಾಲಾ ಮಕ್ಕಳಿಗಾಗಿ ೨೦೦೮ರಲ್ಲಿ ರೂಪಿತವಾದ ವರ್ಣರಂಜಿತ ಗೋಡೆ ಪತ್ರಿಕೆ. ಈ ಪತ್ರಿಕೆ ಕರ್ನಾಟಕದ ನೂರಾರು ಶಾಲೆಗಳ ಗೋಡೆಗಳನ್ನು ಅಲಂಕರಿಸುತ್ತಾ ಸಕಾರಾತ್ಮಕ ಸುದ್ದಿಯನ್ನು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಲುಪಿಸುತ್ತದೆ. ಪರಿಸರ, ಹಸಿರು ಜೀವನ ಶೈಲಿ ಮುಂತಾದ ವಿಚಾರ ಶಕ್ತಿಯನ್ನು ಪ್ರಚೋದಿಸಬಲ್ಲ ಮಾಹಿತಿಯುಕ್ತ ಗೋಡೆ ಪತ್ರಿಕೆಯಾಗಿದೆ.
“ಚಿಣ್ಣರ ಚೇತನ” ಗೋಡೆ ಪತ್ರಿಕೆಯು ದಶಕಗಳ ಅನುಭವದಿಂದ ಸಚೇತನಗೊಂಡು, ಈಗ “ಅದಮ್ಯ ಚೇತನ” ವಾಗಿ ಶಾಲೆಯ ಗೋಡೆಗಳಷ್ಟೇ ಅಲ್ಲ ನಮ್ಮ ಮನೆ – ಕಚೇರಿ ಗಳ ಗೋಡೆ ಸಹ ಅಲಂಕರಿಸಲಿದೆ. ಜೀವನದರ್ಶಿ,
ಸಕಾರಾತ್ಮಕ ಹಾಗೂ ಕುತೂಹಲಕಾರಿ ಮಾಹಿತಿಗಳನ್ನು ಮಕ್ಕಳಷ್ಟೇ ಅಲ್ಲ ಹಿರಿಯರು ಸಹ ಓದಬೇಕು ಎಂಬ ಸದುದ್ದೇಶ.
ಜುಲೈ – 2024 ರ ಸಂಚಿಕೆಯ ವಿದ್ಯುನ್ಮಾನ ಪ್ರತಿ ನಿಮ್ಮ ಮುಂದೆ.
ಮುದ್ರಿತ ಪ್ರತಿಗಾಗಿ ಸಂಪರ್ಕಿಸಿ 8904623967
ಬೆಂಗಳೂರಿನ ಚಾಮರಾಜಪೇಟೆಯ ಶ್ರೀರಾಮ ಶಿಶುವಿಹಾರ ಶಕುಂತಲಾದೇವಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರು ಹಾಗೂ 39 ವಿದ್ಯಾರ್ಥಿಗಳು 2024ರ ಫೆ. 20ರಂದು ಅದಮ್ಯ ಚೇತನಕ್ಕೆ ಭೇಟಿ ನೀಡಿ, ʻʻಅನ್ನಪೂರ್ಣʼʼ ಅಡುಗೆ ಮನೆಯ ಸೇವಾ ಚಟುವಟಿಕೆಗಳನ್ನು ವೀಕ್ಷಿಸಿದರು. ನಂತರ ಊಟ ಮಾಡಿ ತೆರಳಿದರು.
ಅದಮ್ಯ ಚೇತನದಲ್ಲಿ ಫೆ.3ರಂದು ನಡೆದ ಜನವರಿ-24ರ ʻʻಅ-ಚಾಟ್ʼʼ ಕಾರ್ಯಕ್ರಮದಲ್ಲಿ 2024ರ ಫೆಬ್ರವರಿ ತಿಂಗಳ ʻʻಚಿಣ್ಣರ ಚೇತನʼʼ ಗೋಡೆ ಪತ್ರಿಕೆಯನ್ನು ಹಿರಿಯ ಕಲಾವಿದ ಅಬ್ಬೂರು ಜಯತೀರ್ಥ ಅವರು ಬಿಡುಗಡೆ ಮಾಡಿದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಉಪಸ್ಥಿತರಿದ್ದರು.
ಅದಮ್ಯ ಚೇತನ ಸಂಸ್ಥೆಯ ಹೆಮ್ಮೆಯ ಯೋಜನೆ ʻಚಿಣ್ಣರ ಚೇತನʼ ಜನೆವರಿ ತಿಂಗಳ ಗೋಡೆಪತ್ರಿಕೆಯನ್ನು ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ. ಕೃಷ್ಣಭಟ್ಟ ಹಾಗೂ ಅನಂತಕುಮಾರ್ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಸಂಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.
ಬೆಂಗಳೂರಿನ ಜಯನಗರದ ಕಮ್ಯುನಿಟಿ ಸೆಂಟರ್ ಶಾಲೆಯ ವಿದ್ಯಾರ್ಥಿಗಳು ದಿ. 04-12-2023 ರಂದು ಅನಂತ ಪ್ರೇರಣಾ ಕೇಂದ್ರಕ್ಕೆ ಭೇಟಿ ನೀಡಿ, ಶ್ರೀ ಅನಂತಕುಮಾರ ಅವರ ಬಾಲ್ಯ, ಶಿಕ್ಷಣ, ರಾಜಕೀಯ, ಸಾಮಾಜಿಕ ಕಳಕಳಿ ಕುರಿತ ಚಿತ್ರಪ್ರದರ್ಶಿನಿ ಹಾಗೂ ಕಿರುಚಿತ್ರ ಪ್ರದರ್ಶನಗಳನ್ನು ವೀಕ್ಷಿಸಿದರು. ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ಶ್ರೀ ಅನಂತಕುಮಾರ ಅವರ ಆಶಯಗಳ ಸಾಕಾರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಸಂಕಲ್ಪ ಮಾಡಿದರು.
ಸಕಾರಾತ್ಮಕ ವಿಸ್ಮಯಕಾರಿ ಹಾಗೂ ಕುತೂಹಲಕಾರಿ ಮಾಹಿತಿಗಳನ್ನು ಮಕ್ಕಳಿಗೆ ತಿಳಿಸುವ ಸದುದ್ದೇಶದೊಂದಿಗೆ ಅದಮ್ಯ ಚೇತನ ಸಂಸ್ಥೆಯು ಆರಂಭಿಸಿರುವ ‘ಚಿಣ್ಣರ ಚೇತನ’ ಗೋಡೆಪತ್ರಿಕೆಯ ಈ ಶೈಕ್ಷಣಿಕ ವರ್ಷದ ನವೆಂಬರ್- 2023 ಸಂಚಿಕೆ 28-10-2023 ರಂದು ಮಾಜಿ ಶಿಕ್ಷಣ ಸಚಿವರು, ಹಾಲಿ ಶಾಸಕರು ಶ್ರೀ ಸುರೇಶ್ ಕುಮಾರ್ ಅವರು ಬಿಡುಗಡೆ ಮಾಡಿದರು. ಪ್ರಸಕ್ತ ತಿಂಗಳ ಚಿಣ್ಣರ ಚೇತನ ಕುರಿತು ಪರಿಸರವಾದಿ ಶ್ರೀ ನಾಗೇಶ ಹೆಗಡೆ ಅಂತರ್ಜಾಲದಲ್ಲಿ ಮಾತನಾಡಿದರು. ಅನಂತಕುಮಾರ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ.ಕೃಷ್ಣಭಟ್ , ಅದಮ್ಯ ಚೇತನ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಅನಂತಪಥ ಮಾಸಪತ್ರಿಕೆಯ ಸಂಪಾದಕ ಶ್ರೀ ಟಿ.ಎಸ್. ಗೋಪಾಲ್, ನಿರ್ದೇಶಕ ಶ್ರೀ ಪ್ರದೀಪ ಓಕ್ ಮೊದಲಾದವರು ಉಪಸ್ಥಿತರಿದ್ದರು.
ಅದಮ್ಯ ಚೇತನ ಸಂಸ್ಥೆಯ ಹೆಮ್ಮೆಯ ಯೋಜನೆ ʻಚಿಣ್ಣರ ಚೇತನʼ ಸೆಪ್ಟೆಂಬರ್ ತಿಂಗಳ ಗೋಡೆಪತ್ರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಷಿ ಹಾಗೂ ಕನ್ನಡ ಸಿನಿಮಾ ನಟಿ ಪೂಜಾಗಾಂಧಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಸೆ. 12ರಂದು ಬಿಡುಗಡೆ ಮಾಡಿದರು. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಗೋಡೆಪತ್ರಿಕೆಯ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಹಾಗೂ ಅದಮ್ಯ ಚೇತನ ಸಂಸ್ಥೆಯ ಕಳಕಳಿಯನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಕ. ಸಾ. ಪ. ಗೌರವ ಕಾರ್ಯದರ್ಶಿ ಶ್ರೀ ರಾಮಲಿಂಗ ಶೆಟ್ಟಿ, ಗಣ್ಯರಾದ ಶ್ರೀ ಜಿ.ಎಂ. ಇನಾಂದಾರ್, ಶ್ರೀ ಕುಮಾರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ಅದಮ್ಯ ಚೇತನ ಸಂಸ್ಥೆಯು ಪ್ರತಿ ತಿಂಗಳು ವಿನೂತನವಾಗಿ ಪ್ರಕಟಿಸುವ ʻಚಿಣ್ಣರ ಚೇತನʼ ಗೋಡೆಪತ್ರಿಕೆಯನ್ನು ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನಲ್ಲಿಒರುವ ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಶುಕ್ರವಾರದಂದು (ಆ.11) ಬಿಡುಗಡೆಗೊಳಿಸಲಾಯಿತು. ಎನ್.ಡಿ.ಆರ್ ಐ ಮಾಜಿ ನಿರ್ದೇಶಕ ಕೆ.ಪಿ. ರಮೇಶ್, ಬಿಬಿಎಂಪಿ ಕಾರ್ಪೋರೇಟರ್ ಶ್ರೀ ಗುರುಮೂರ್ತಿ ರೆಡ್ಡಿ, ಆಕ್ಸ್ ಫರ್ಡ್ ಕಾನೂನು ಕಾಲೇಜು ಪ್ರಾಚಾರ್ಯ ಡಾ. ಪ್ರಜ್ಞಾ ಪಾಟೀಲ್, ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ. ಕಾವ್ಯಶ್ರೀ, ವ್ಯವಹಾರ ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಡಾ. ನಿಕಿತಾ ಆಲೂರು, ಕಲಾ ಕಾಲೇಜಿನ ಪ್ರಾಚಾರ್ಯ ಶ್ರೀಮತಿ ಗಾಯತ್ರಿ, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಜೆಪಿ ಮಹಿಳಾ ಮೋರ್ಚಾ (ಬೆಂಗಳೂರು ದಕ್ಷಿಣ) ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಇತರೆ ಗಣ್ಯರಿದ್ದರು. ಪರಿಸರವಾದಿ ಚಿಂತಕ ನಾಗೇಶ ಹೆಗಡೆ ಅವರು ಅಂತರ್ಜಾಲದ ಮೂಲಕ ಗೋಡೆ ಪತ್ರಿಕೆಯ ವಿಶೇಷತೆ ಕುರಿತು ಮಾತನಾಡಿದರು.