Degula Darshana
ದೇಗುಲದರ್ಶನ
Temple showcase program:
An initiative has been underway to visit, conduct research and record the findings on the ancient temples of Karnataka. Under the supervision of Adamya Chetana, a team has been constituted to conduct a long term, systematic study and research on temples. Details of their location, historical importance, place in folklore, architecture, current state, conservation measures needed, etc. are recorded along with photographs. To ignite interest in the rich architecture of our great civilization, a monthly webinar series on temples of India is organized.
ಕರ್ನಾಟಕದ ಪುರಾತನ ದೇಗುಲಗಳ ಪರಿಚಯ, ಅಧ್ಯಯನ ಮತ್ತು ದಾಖಲೀಕರಣಗಳ ಚಟುವಟಿಕೆಯನ್ನು ಪ್ರಾರಂಭಿಸಿದೆ. ಅದಮ್ಯ ಚೇತನ ಸಂಸ್ಥೆಯ
ಪ್ರಾಯೋಜಕತ್ವದಲ್ಲಿ ದೀರ್ಘಕಾಲೀನ ಯೋಜನೆಯ ಅಡಿಯಲ್ಲಿ ಕ್ರಮಬದ್ಧವಾದ ಅಧ್ಯಯನ, ಸ್ಥಳ ಪರಿಚಯ, ಇತಿಹಾಸ, ಪೌರಾಣಿಕ ಮಹತ್ವ, ಜಾನಪದ ಐತಿಹ್ಯ, ಕಟ್ಟಡದ ವಾಸ್ತು,
ಶಿಲ್ಪಕಲೆ, ವರ್ತಮಾನದ ಸ್ಥಿತಿಗತಿ, ಸಂರಕ್ಷಣೆಗಾಗಿ ಅನುಸರಿಸಬಹುದಾದ ಕ್ರಮಗಳು ಮೊದಲಾದವನ್ನೊಳಗೊಂಡ ಅಧ್ಯಯನ ಟಿಪ್ಪಣಿಗಳನ್ನು ವ್ಯಾಪಕ ಛಾಯಾಚಿತ್ರಗಳ
ನೆರವಿನೊಂದಿಗೆ ಸಿದ್ಧಪಡಿಸಲು ಒಂದು ತಂಡವನ್ನು ರಚಿಸಲಾಗಿದೆ. ಪ್ರತಿ ತಿಂಗಳ ಎರಡನೇ ಶುಕ್ರವಾರ ದೇಗುಲದರ್ಶನ ಮಾಲಿಕೆ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿ ನಾಡಿನ
ವಿವಿಧೆಡೆಗಳ ದೇಗುಲಗಳನ್ನು ಪರಿಚಯಿಸಲಾಗುತ್ತಿದೆ.