Adamya Green #393
ಅದಮ್ಯ ಚೇತನ ಹಾಗೂ ಪ್ರಮೋಥೇಸ್ ಗ್ರೂಪ್ ( ಯುತಿಯೋಪಿಯ ಗ್ರುಪ್) ಸಂಸ್ಥೆಯ ಸಹಯೋದೊಂದಿಗೆ ದಿನಾಂಕ 09-07-2023 ರಂದು 393 ನೇ ಹಸಿರು ಭಾನುವಾರ ಕಾರ್ಯಕ್ರಮವು ಎಲೆಕ್ಟ್ರಾನಿಕ್ ಸಿಟಿಯ ನ್ಯೂಟೌನ್ ನಲ್ಲಿರುವ ಮಾರಗೊಂಡನಹಳ್ಳಿ ಕೆರೆ ಬದಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. 200 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಯುತಿಯೋಪಿಯ ಗ್ರುಪ್ ನಿರ್ದೇಶಕ ಶ್ರೀ ಜಯನಂದನ್ , ಶ್ರೀ ಸುಜಿತ್ ಕುಮಾರ್, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಸ್ವಯಂ ಸೇವಾ ಕಾರ್ಯಕರ್ತರು ಮೊದಲಾದವರು ಭಾಗಿಯಾಗಿದ್ದರು.