OUR PROJECTS

TERI International team visits Annapoorna

An international delegation from TERI (The Energy & Resources Institute) visited Adamya Chetana office at Annapoorna on 21st January 2009. The delegation comprised of 30 experts from 25 countries. The team particularly studied the Bio Gasifier Plant established with the technical support of TERI, in the Kitchen of Annapoorna.  This gasifier has reduced the cost of food preparation to a great extent.
You can read this Kannada note on the biogasifier.

ಅದಮ್ಯ ಚೇತನದಿಂದ ಬಯೋಗ್ಯಾಸಿಫೈಯರ್ ಬಳಕೆ

ಅದಮ್ಯ ಚೇತನ ಸಂಸ್ಥೆಯು ಬೆಂಗಳೂರಿನಲ್ಲಿ ೮೦ ಸಾವಿರಕ್ಕೂ ಹೆಚ್ಚು ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸಿ ಸರಬರಾಜು ಮಾಡುತ್ತಿದೆ. ಈ ತಯಾರಿಕೆಯಲ್ಲಿ ಇಂಧನವೆಚ್ಚವನ್ನು ತಗ್ಗಿಸುವ ಹಿನ್ನೆಲೆಯಲ್ಲಿ ಕಳದ ಏಳು ವರ್ಷಗಳಿಂದ ಅನ್ನಪೂರ್ಣದಲ್ಲಿ ಬಯೋಗ್ಯಾಸಿಫೈಯರ್ ಘಟಕವನ್ನು ಸ್ಥಾಪಿಸಲಾಗಿದೆ.

ದಿ ಎನರ್ಜಿ ಎಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಖಿಇಖI) ಯ ತಾಂತ್ರಿಕ ಸಹಯೋಗದಲ್ಲಿ ಸ್ಥಾಪಿಸಲಾಗಿರುವ ಈ ಘಟಕದ ಬಳಕೆಯಿಂದಾಗಿ ಅನ್ನಪೂರ್ಣದ ಊಟ ತಯಾರಿಕೆ ಖರ್ಚಿನಲ್ಲಿ ದಿನವೊಂದಕ್ಕೆ ೩೦೦೦ ರೂ.ಗಳ ಉಳಿತಾಯವಾಗುತ್ತಿದೆ. ಪ್ರತಿಯೊಂದೂ ಊಟದ ತಯಾರಿಗೆ ಬಯೋಗ್ಯಾಸಿಫೈಯರ್ ಮೇಲೆ ೬ರಿಂದ ೭ ಪೈಸೆಗಳನ್ನು ಮಾತ್ರ ಖರ್ಚು ಮಾಡಲಾಗುತ್ತಿದೆ. ಬಯೋಗ್ಯಾಸಿಫೈಯರ್ ಇಲ್ಲದಿದ್ದರೆ ಒಟ್ಟು ೨೦ ಪೈಸೆ ಖರ್ಚಾಗುತ್ತಿತ್ತು; ಈಗ ಈ ವೆಚ್ಚ ಸುಮಾರು ೧೫ ಪೈಸೆಗಳಿಗೆ ಇಳಿದಿದೆ.

ಇಂಧನವೆಚ್ಚವನ್ನು ಉಳಿಸುವಲ್ಲಿ ಇಂಥ ಸಮುದಾಯ ಅಡುಗೆ ತಯಾರಿಕೆ ಘಟಕಗಳಲ್ಲಿ ಬಯೋಗ್ಯಾಸಿಫೈಯರ್‌ಗಳನ್ನು ಸ್ಥಾಪಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಂಡು ನಾಡಿನ ಇಂಧನ ಬೇಡಿಕೆಯನ್ನು ತಗ್ಗಿಸಬಹುದಾಗಿದೆ.

Copyright © 2006-2009 Adamya Chetana Foundation All Rights resrerved.
raktadan.org | sevaa.org.in
Powered By Dhyeya Tech