Plate Bank
ತಟ್ಟೆ ಲೋಟಗಳ ಬ್ಯಾಂಕ್
Reusable plate-bank:
In many functions or events, plastic or paper plates and cups are used. Sometimes, areca nut based plates are also used. These disposable plates, cups and cutlery add to our garbage woes. Not properly recycling them is increasing pollution in our cities. As a sustainable alternative, Adamya Chetana has set up a unique bank with around 10,000 sets of steel plates, spoons, tumblers, cups, etc. These can be borrowed by anyone FREE for their events to serve food, turning their events green. Reduce-Reuse is the mantra at Adamya Chetana!
ಮರುಬಳಕೆ ಮಾಡುವ ತಟ್ಟೆ ಲೋಟಗಳ ಬ್ಯಾಂಕ್
ಇತ್ತೀಚಿನ ದಿನಗಳಲ್ಲಿ ಬಹುತೇಕ ಸಭೆ ಸಮಾರಂಭಗಳಲ್ಲಿ ಊಟ ತಿಂಡಿಗೆ ಪ್ಲಾಸ್ಟಿಕ್ ಲೋಟ – ತಟ್ಟೆಗಳನ್ನು ಬಳಸಲಾಗುತ್ತಿದೆ, ಕೆಲವೆಡೆ ಅಡಿಕೆ ತಟ್ಟೆಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದಾಗಿ ಕಸದ ಪ್ರಮಾಣ ಹೆಚ್ಚುತ್ತಿದೆ. ಇವುಗಳು ಸರಿಯಾದ ರೀತಿಯಲ್ಲಿ ಮರುಬಳಕೆಯಾಗದೆ ನಗರದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಅದಮ್ಯ ಚೇತನ ಸಂಸ್ಥೆಯಲ್ಲಿ ಸುಮಾರು ೧೦,೦೦೦ ಸ್ಟೀಲ್ ತಟ್ಟೆಗಳು, ಚಮಚಗಳು, ಲೋಟಗಳನ್ನು ಖರೀದಿಸಿ ಸಂಗ್ರಹಿಸಲಾಗಿದೆ. ನಗರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಊಟದ ಉಪಯೋಗಕ್ಕಾಗಿ ಈ ಸ್ಟೀಲ್ ತಟ್ಟೆಗಳನ್ನು ನಿಃಶುಲ್ಕವಾಗಿ ನೀಡಲಾಗುವುದು. ಮಿತ ಬಳಕೆ – ಮರುಬಳಕೆ ಅದಮ್ಯ ಚೇತನದ ಮಂತ್ರ.
ಮಾನ್ಯರೇ
ಬೆಂಗಳೂರಿನಲ್ಲಿ ಕಸ ಕಡಿಮೆ ಮಾಡಿ ಪರಿಸರ ಮಾಲಿನ್ಯ ತಡೆಯುವ ಅದಮ್ಯ ಚೇತನದ ಪ್ರಯತ್ನದಲ್ಲಿ ತಾವು ಕೈಜೋಡಿಸಿ ನಿಮ್ಮ ಕಾರ್ಯಕ್ರಮಗಳಿಗೆ ನಮ್ಮ ಪ್ಲೇಟ್ ಬ್ಯಾಂಕ್‌ನಿAದ ಸ್ಟೀಲ್ ತಟ್ಟೆ ಲೋಟಗಳನ್ನು ಪಡೆಯುತ್ತಿರುವುದು ತುಂಬಾ ಸಂತೋಷದ ವಿಷಯ. ಸಮಾರಂಭಗಳಲ್ಲಿ ಬಳಸುವ ಪ್ಲಾಸ್ಟಿಕ್ ತಟ್ಟೆ ಲೋಟಗಳಿಂದ ವನ್ಯಜೀವಿಗಳಿಗೆ ತೊಂದರೆ, ಗಿಡಗಳ ನಾಶ, ಕಸದ ಪ್ರಮಾಣ ಹೆಚ್ಚಳವಾಗುತ್ತಿದೆ. ಆದುದರಿಂದ ನಿಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಸ್ಟೀಲ್, ತಾಮ್ರ, ಮಡಿಕೆ ಮುಂತಾದ ಬೇರೆ ಬೇರೆ ಪರಿಸರಸ್ನೇಹಿ ವಸ್ತುಗಳನ್ನು ಬಳಸಿ ಹಾಗೂ ನಿಮ್ಮ ಬಂಧು ಮಿತ್ರರು, ಸ್ನೇಹಿತರೂ ಈ ಪರಿಸರಸ್ನೇಹಿ ವಸ್ತುಗಳನ್ನು ಉಪಯೋಗಿಸಲು ಪ್ರೇರೇಪಿಸಿ.
ಒಮ್ಮೆ ಮಾತ್ರ ಬಳಸಿ ಬಿಸಾಡುವ ಪ್ಲೇಟ್, ಲೋಟ, ಚಮಚಗಳನ್ನು ಉಪಯೋಗಿಸಿ ಕಸವನ್ನು ಹೆಚ್ಚಿಸುವುದು ಬೇಡ. ಪುನರ್ ಬಳಕೆ ಮಾಡುವಂತಹ ಅದಮ್ಯ ಚೇತನ ಪ್ಲೇಟ್ ಬ್ಯಾಂಕ್‌ನ ಪ್ಲೇಟ್, ಲೋಟ, ಚಮಚಗಳನ್ನು ಬಳಸೋಣ. ಮರೆಯಲಾಗದ ಕಾರ್ಯಕ್ರಮಗಳನ್ನು ಪರಿಸರ ಸ್ನೇಹಿಯಾಗಿಸೋಣ.
ತ್ಯಾಜ್ಯ ಕಡಿಮೆಗೊಳಿಸೋಣ – ಬದುಕನ್ನು ಹಸನಾಗಿಸೋಣ. ಮಿತ ಬಳಕೆ – ಮರುಬಳಕೆ ಅದಮ್ಯ ಚೇತನದ ಮಂತ್ರ.
ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಪಡೆಯಲು ನಿಯಮಗಳು
೧. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಪಡೆಯಲು ಬರುವವರು ಒಂದು ವಾರ ಮುಂಚಿತವಾಗಿ Request Form ಕೊಡಬೇಕು. (Online OR Offline ಮೂಲಕ ಮಾಡಬಹುದು.)
೨. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ಕೊಡಲು ಮತ್ತು ವಾಪಾಸ್ ಪಡೆಯಲು ಸಮಯ : ಮಧ್ಯಾಹ್ನ ೨ ರಿಂದ ೫.೩೦ ಘಂಟೆಯವರೆಗೆ. ಸೋಮವಾರದಿಂದ ಶನಿವಾರದವರೆಗೆ ಮಾತ್ರ. ಭಾನುವಾರ ಇರುವುದಿಲ್ಲ.
೩. Plate Bank ನಲ್ಲಿರುವ ತಟ್ಟೆ, ಲೋಟ, ಚಮಚ, ಕಠೋರಿ ಇತ್ಯಾದಿಗಳನ್ನು ನಿಶುಲ್ಕವಾಗಿ ನೀಡುತ್ತೇವೆ, ಯಾವುದೇ ಬಾಡಿಗೆ ಇಲ್ಲ. ಪಡೆದುಕೊಂಡಿರುವ ವಸ್ತುಗಳ ಮೌಲ್ಯಕ್ಕೆ 10% Cash , 90% Cheque ಮೂಲಕ ಡೆಪಾಸಿಟ್ ಇಡಬೇಕು.
೪. Plate Bank Issue Form ನಲ್ಲಿ ವಸ್ತುಗಳ ತೂಕವನ್ನು ಕಡ್ಡಾಯವಾಗಿ ಬರೆಯುವುದು. ವಾಪಾಸ್ ಬಂದ ಮೇಲೆ ತೂಕವನ್ನು ಪರಿಶೀಲಿಸುವುದು.
೫. Plate Bank ೧ನೇ ಮಹಡಿಯಲ್ಲಿದೆ. ಸಂಸ್ಥೆಯಲ್ಲಿ ಕೆಲಸದ ಒತ್ತಡ ಜಾಸ್ತಿ ಇರುವುದರಿಂದ ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ತೆಗೆದುಕೊಂಡು ಹೋಗಲು/ಮರಳಿ ಬಂದ ಮೇಲೆ ಎಣಿಸಿ ನೋಡಿಕೊಳ್ಳಲು ಸಹಾಯಕ್ಕೆ ಕಾರ್ಯಕರ್ತರನ್ನು ನೀವೇ ಕರೆದುಕೊಂಡು ಬರುವುದು. ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ವಾಪಾಸ್ ಕಳುಹಿಸುವಾಗ ಸಹಾಯಕರಿಲ್ಲದೆ ಬರೇ ವಸ್ತುಗಳನ್ನು ಮಾತ್ರ ಬಾಡಿಗೆ ವಾಹನದಲ್ಲಿ ಕಳುಹಿಸುವಂತಿಲ್ಲ.
೬. ತೆಗೆದುಕೊAಡು ಹೋದ ವಸ್ತುಗಳನ್ನು ತೊಳೆದು ಒರೆಸಿ, ಒಣಗಿಸಿ ಹಿಂತಿರುಗಿಸುವುದು.
೭. ವಸ್ತುಗಳು scratch ಆಗದೇ ಇರುವ ಹಾಗೆ ತೊಳೆಯುವುದು. ಪಾತ್ರೆಗಳನ್ನು ತೊಳೆಯಲು ಸ್ಟೀಲ್‌ನಾರು ಬಳಸಬೇಡಿ, ಸ್ಪಂಜ್‌ನಿಂದ ತೊಳೆಯಿರಿ. ಸ್ಪಂಜ್ ನೀಡಲಾಗುವುದು
೮. ತೊಳೆದ ಲೋಟ/ಬೌಲ್‌ಗಳನ್ನು ಒಂದರ ಒಳಗೊಂದು ಹಾಕಬಾರದು. scratch ಆಗುತ್ತದೆ.
೯. ತೆಗೆದುಕೊಂಡು ಹೋದ ವಸ್ತು ಕಳೆದು ಹೋದಲ್ಲಿ ಆ ವಸ್ತುವಿನ ಬೆಲೆಯ ಮೊತ್ತವನ್ನು ಕೊಡುವುದು.
೧೦. ಪಾತ್ರೆಗಳು ಸ್ವಚ್ಛವಾಗಿಲ್ಲದಿದ್ದರೆ ಒಂದು ವಸ್ತು/ಪಾತ್ರೆಗೆ ೧ ರೂ./೫೦ ಪೈಸೆಯಂತೆ ನಿಮ್ಮ ಡೆಪಾಸಿಟ್ ಮೊತ್ತದಲ್ಲಿ ಕಡಿತಗೊಳಿಸಲಾಗುವುದು.
೧೧. ನಿಗದಿತ ದಿನಾಂಕದAದು ಪ್ಲೇಟ್‌ಬ್ಯಾಂಕ್ ವಸ್ತುಗಳನ್ನು ವಾಪಾಸ್ ತರದಿದ್ದಲ್ಲಿ ದಿನಕ್ಕೆ ಸೂಕ್ತವಾದ ಶುಲ್ಕವನ್ನು ವಿಧಿಸಲಾಗುವುದು.
೧೨. ತಾವು ತೆಗೆದುಕೊಂಡು ಹೋದ ಎಲ್ಲಾ ವಸ್ತುಗಳನ್ನು ಹಿಂತಿರುಗಿಸಿದ ಮೇಲೆ ತಾವು ನೀಡಿದ ಚೆಕ್ ಮತ್ತು ನಗದನ್ನು ಹಿಂಪಡೆಯುವುದು.