Seva Ustav
ಸೇವಾಉತ್ಸವ
Adamya Chetana Seva Utsava: A Celebration of Culture and Service
Adamya Chetana Seva Utsava celebrates culture and service, marking the start of each new year in a unique and innovative way. Thousands come together to sing Vande Mataram in unison and make a public pledge to serve the nation and society. The Utsava features a variety of theme-based competitions, cultural programs, a blood donation camp, and grand exhibitions by social service organizations. It showcases craftsmanship, creative ways to reuse and recycle, and highlights children’s talents. Additionally, it serves as a platform for nation-building by raising awareness about sustainability and fostering a vision for a greener and greater Bharat. Organized annually in collaboration with the Kannada and Culture Department, every year, the Utsav honored with the presence of dignitaries from both the national and the state leaders.
ಅನಂತ ಸೇವಾ ಉತ್ಸವವು ಸಂಸ್ಕೃತಿ, ಸೇವೆ ಮತ್ತು ಸಂಕಲ್ಪವನ್ನು ಒಂದೇ ವೇದಿಕೆಯಲ್ಲಿ ತರುವ ಹೊಸ ವರ್ಷದ ವಿನೂತನ ಆಚರಣೆಯಾಗಿದೆ. ವಂದೇ ಮಾತರಂ ಹಾಡಲು ಸಾವಿರಾರು ಮಂದಿ ಒಂದಾಗಿ ಸೇರಿ, ದೇಶ ಮತ್ತು ಸಮಾಜದ ಸೇವೆಗೆ ಸಂಕಲ್ಪ ಮಾಡುವುದು ಈ ಉತ್ಸವದ ವಿಶೇಷತೆಯಾಗಿದೆ. ಇಲ್ಲಿ ವಿವಿಧ ಸ್ಪರ್ಧೆಗಳು, ರಕ್ತದಾನ ಶಿಬಿರ, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳ ಬೃಹತ್ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಉತ್ಸವವು ಕರಕುಶಲತೆ, ಕಸದಿಂದ ರಸ ಮತ್ತು ಮಕ್ಕಳ ಪ್ರತಿಭೆಗೆ ವೇದಿಕೆಯನ್ನು ಒದಗಿಸುತ್ತದೆ.
ಇದು ಅಲ್ಲದೆ, ಉತ್ಸವವು ಪರಿಸರ ಜಾಗೃತಿಯನ್ನು ಹೆಚ್ಚಿಸುವ ಮೂಲಕ ಭವ್ಯ ಮತ್ತು ಹಸಿರು ಭಾರತ ಕಟ್ಟಲು ಮಹತ್ವದ ವೇದಿಕೆಯಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜನೆಗೊಳ್ಳುತ್ತಿದೆ. ಪ್ರತಿ ವರ್ಷ ಈ ಉತ್ಸವವು ದೇಶದ ಹಾಗೂ ರಾಜ್ಯದ ಗಣ್ಯರ ಉಪಸ್ಥಿತಿಯಿಂದ ಮತ್ತಷ್ಟು ವೈಭವ ಸೆರೆಹಿಡಿಯುತ್ತಿದೆ.
ಈ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳು
- ಬೀದಿನಾಟಕ
- ಸಮೂಹ ನೃತ್ಯ ಸ್ಪರ್ಧೆ
- ಸಮೂಹ ಗಾಯನ ಸ್ಪರ್ಧೆ
- ಸಮೂಹ ವಂದೇ ಮಾತರಂ ಗಾಯನ
- ಭಗವದ್ಗೀತಾ ಶ್ಲೋಕ ಪಠಣ ಸ್ಪರ್ಧೆ
- ಭಜನಾ ಸ್ಪರ್ಧೆ
- ದೇಸಿ ಅಡುಗೆ
- ರಸ ಪ್ರಶ್ನೆ