Adamya Chetana

Ananth Naman 65
ಅನಂತ ನಮನ 65

INAUGURATION OF NITYA ANNADANA AT JODHPUR – Join us for a noble cause!
We are excited to announce the inauguration of Nitya Anna Dana program as part of Ananth Naman 65. A daily meal donation program aimed at providing nutritious food to those in need.
At Adamya Chetana, we believe in service and compassion. With this program, we are committed to ensuring that no one goes hungry.
Through this initiative, Adamya Chetana will continue to inspire with projects that focus on education, women empowerment, health, and environmental protection.

Celebration of Shri Ananth Kumar’s 65th Birth Anniversary in Jodhpur

Born in Karnataka and rising to become a national leader, Shri Ananth Kumar’s 65th birth anniversary is being celebrated at “Adamya Chetana” in Jodhpur, Rajasthan.
On this occasion, several green initiatives such as the “Plate Bank,” an automatic machine that prepares 15,000 chapatis per hour, and a daily annadaan (food donation) program are being launched.
Dignitaries attending the event include Rajasthan Ministers Shri K.K. Bishnoi, Shri Jogaram Patel, Shri Joraram Kumbhawat, and MLAs Shri Atul Bansali, Shri Devendra Joshi, Shri Mahendrasingh Rathod, along with Shri Rajendra Singh, President of Ravana Rajput Samaj, and Karnataka MP Shri Govind Karjol, among others.
 
Celebrations in Bengaluru:
In 2015, Shri Ananth Kumar had launched the “Sasyagraha” movement to promote a green lifestyle and environmental protection. On September 22 of the same year, he planted special saplings such as Rudraksha, Kadamba, and Bilva at Anantha Vana on B.P. Wadia Road. Today, those saplings have grown into trees taller than 30 feet, transforming the area into a lush, beautiful forest.
This year, his birthday will be celebrated with a tree planting event at Anantha Vana on the morning of September 22. A program will also be held at 11:00 AM at the Ananth Prerana Kendra near South End Circle, Bengaluru, which was built in his memory.
Celebrations will be organsied at daily food donation (Nitya Annadaan) places will be organized – Adamya Chetana, Bengaluru, Kannada Katte in Jayanagar 4th Block, Nagareshwara Temple in Nagarathpet, Lake View Mahaganapathi Temple in Ulsoor, and Anantha Smriti Vana at the west gate of Lalbagh.
 
Celebrations in Hubballi and Kalaburagi:
Ananth Kumar’s birth anniversary will also be celebrated at Adamya Chetana and Ananth Prerana Kendra in Hubballi, Adamya Chetana in Kalaburagi, and several schools and colleges.

ಜೋಧಪುರದಲ್ಲಿ ಶ್ರೀ ಅನಂತಕುಮಾರ್ ಅವರ ೬೫ನೇ ಜನ್ಮ ದಿನಾಚರಣೆ

ಕರ್ನಾಟಕದಲ್ಲಿ ಜನಿಸಿ ರಾಷ್ಟ್ರವ್ಯಾಪಿ ನಾಯಕರಾಗಿ ಬೆಳೆದ ಶ್ರೀ ಅನಂತಕುಮಾರ ಅವರ ೬೫ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ರಾಜಸ್ಥಾನದ ಜೋಧಪುರದಲ್ಲಿರುವ “ಅದಮ್ಯ ಚೇತನ”ದಲ್ಲಿ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಹಸಿರು ಜೀವನ ಶೈಲಿಯ “ಪ್ಲೇಟ್ ಬ್ಯಾಂಕ್”, ಗಂಟೆಗೆ ೧೫೦೦೦ ಚಪಾತಿ ತಯಾರಿಸುವ ಸ್ವಯಂಚಾಲಿತ ಯಂತ್ರ ಹಾಗೂ ನಿತ್ಯ ಅನ್ನದಾನ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ.
ಜನ್ಮದಿನದ ಸಂಭ್ರಮದಲ್ಲಿ ರಾಜಸ್ಥಾನದ ಮಂತ್ರಿಗಳಾದ ಶ್ರೀ ಕೆ. ಕೆ. ಬಿಷ್ಣೋಯಿ, ಶ್ರೀ ಜೋಗಾರಾಮ್ ಪಟೇಲ್‌, ಶ್ರೀ ಜೋರಾರಾಮ್ ಕುಂಭಾವತ್, ಮತ್ತು ಶಾಸಕರಾದ ಶ್ರೀ ಅತುಲ್ ಬನ್ಸಾಲಿ, ಶ್ರೀ ದೇವೇಂದ್ರ ಜೋಶಿ, ಶ್ರೀ ಮಹೇಂದ್ರಸಿಂಗ್‌ ರಾಠೋಡ್‌, ರಾವಣಾ ರಜಪೂತ ಸಮಾಜದ ಅಧ್ಯಕ್ಷರಾದ ಶ್ರೀ ರಾಜೇಂದ್ರ ಸಿಂಗ್ ಮುಂತಾದವರ ಜೊತೆಗೆ ಕರ್ನಾಟಕದ ಸಂಸದರಾದ ಶ್ರೀ ಗೋವಿಂದ ಕಾರಜೋಳ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
 
ಬೆಂಗಳೂರಿನಲ್ಲಿ ಜನ್ಮದಿನದ ಆಚರಣೆ:
ಅನಂತಕುಮಾರ್‌ ಅವರು ಪರಿಸರದ ರಕ್ಷಣೆಗೆ ಪೂರಕವಾಗಿ ಹಸಿರು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಸ್ಯಾಗ್ರಹ ಆಂದೋಲನಕ್ಕೆ 2015ರಲ್ಲಿ ಕರೆ ನೀಡಿದ್ದರು. ಅದೇ ವರ್ಷ ಅವರ ಜನ್ಮದಿನವಾದ ಸೆಪ್ಟೆಂಬರ್‌ 22 ರಂದು ಬಿ.ಪಿ ವಾಡಿಯಾ ರಸ್ತೆಯ ಅನಂತವನದಲ್ಲಿ ರುದ್ರಾಕ್ಷಿ, ಕದಂಬ, ಬಿಲ್ವ ಮುಂತಾದ ವಿಶೇಷ ಗಿಡಗಳನ್ನು ನೆಟ್ಟಿದ್ದರು. ಇಂದು ಆ ಗಿಡಗಳು 30 ಅಡಿಗಿಂತಲೂ ದೊಡ್ಡದಾಗಿ ಬೆಳೆದು ಆ ಪ್ರದೇಶ ಹಸಿರುಮಯವಾಗಿ ಸುಂದರ ವನವಾಗಿದೆ. ಈ ತಿಂಗಳ 22 ರಂದು ಬೆಳಿಗ್ಗೆ ಅನಂತವನದಲ್ಲಿಯೂ ಗಿಡ ನೆಡುವ ಕಾರ್ಯಕ್ರಮದ ಮೂಲಕ ಜನ್ಮ ದಿನವನ್ನು ಆಚರಿಸಲಾಗುವುದು. ಸೌತ್‌ಎಂಡ್‌ ವೃತ್ತದಲ್ಲಿ ಅನಂತಕುಮಾರ್ ಅವರ ಸ್ಮರಾಣಾರ್ಥವಾಗಿ ನಿರ್ಮಿಸಿರುವ ಬೆಂಗಳೂರಿನ ಅನಂತ ಪ್ರೇರಣಾ ಕೇಂದ್ರದಲ್ಲಿಯೂ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿನಿತ್ಯ ಅನ್ನದಾನ ನಡೆಯುವ ಸ್ಥಳಗಳಾದ ಬೆಂಗಳೂರಿನ ಅದಮ್ಯ ಚೇತನ, ಜಯನಗರ 4 ನೇ ಹಂತ ಕನ್ನಡ ಕಟ್ಟೆ, ನಗರ್ತಪೇಟೆಯ ನಗರೇಶ್ವರ ದೇವಸ್ಥಾನ, ಹಲಸೂರಿನ ಲೇಕ್‌ ವ್ಯೂ ಮಹಾಗಣಪತಿ ದೇವಸ್ಥಾನ, ಲಾಲ್‌ಬಾಗ್‌ ಪಶ್ಚಿಮ ದ್ವಾರದ ಅನಂತಸೃತಿ ವನದಲ್ಲಿ ಆಚರಿಸಲಾಗುವುದು.
 
ಹುಬ್ಬಳ್ಳಿ, ಕಲಬುರಗಿಯಲ್ಲಿ ಜನ್ಮದಿನದ ಆಚರಣೆ:
ಹುಬ್ಬಳಿಯ ಅದಮ್ಯ ಚೇತನ, ಅನಂತ ಪ್ರೇರಣಾ ಕೆಂದ್ರ, ಕಲಬುರಗಿಯ ಅದಮ್ಯ ಚೇತನ, ಅನೇಕ ಶಾಲಾ ಕಾಲೇಜುಗಳಲ್ಲಿಯೂ ಜನ್ಮದಿನವನ್ನು ಆಚರಿಸಿಲಾಗುತ್ತಿದೆ.
ಅದಮ್ಯ ಚೇತನದ ಶಕ್ತಿ ಶ್ರೀ ಅನಂತಕುಮಾರ್ ಅವರ “ಅನಂತ ನಮನ 65” ಕಾರ್ಯಕ್ರಮಕ್ಕಾಗಿ ಅದಮ್ಯ ಚೇತನ ಜೋಧಪುರದಲ್ಲಿ ಸಿದ್ಧತೆಗಳು ನಡೆದಿದ್ದು, ಕಾರ್ಯಕ್ರಮ ಸ್ಥಳದ ಪೂರ್ವ ತಯಾರಿ ಕ್ಷಣಗಳು.