

ಅನಂತ ಪ್ರೇರಣಾ ಕೇಂದ್ರ – ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮ
ಶ್ರೀ ಅನಂತಕುಮಾರರ ಜೀವನ, ವ್ಯಕ್ತಿತ್ವ, ಹಾಗೂ ಸಾಧನೆಗಳನ್ನು ಪರಿಚಯಿಸುವ ಪ್ರೇರಣಾದಾಯಕ ಮಾಹಿತಿ ಕೇಂದ್ರ. ಬೆಂಗಳೂರಿನ ಸೌತ್ ಎಂಡ್ ವೃತ್ತ ಮತ್ತು ಹುಬ್ಬಳ್ಳಿ ವಿಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರವು ಯುವಶಕ್ತಿಗೆ ದಾರಿದೀಪವಾಗಿದ್ದು, ಅವರ ಜೀವನ ಚರಿತ್ರೆಯ ಚಲನಚಿತ್ರ ಪ್ರದರ್ಶನ, ತಂತ್ರಜ್ಞಾನ ಸೌಲಭ್ಯ ಹಾಗೂ ಅನನ್ಯ ನೆನಪುಗಳನ್ನು ಒಳಗೊಂಡಿದೆ.
2023ರಲ್ಲಿ ಸ್ಥಾಪಿತವಾದ ಈ ಕೇಂದ್ರವು 3ನೇ ವರ್ಷಕ್ಕೆ ಕಾಲಿಡುತ್ತಿದ್ದು, ಭೇಟಿ ನೀಡಿ ಪ್ರೇರಣೆ ಪಡೆದುಕೊಳ್ಳಿ. ಈ ಕಾರ್ಯಕ್ರಮದ ಸ್ಪರ್ಧೆಗಳ ವಿವರಗಳು:
- ದೇಶಭಕ್ತಿ ಗಾಯನ ಸ್ಪರ್ಧೆ
- ಭಗವದ್ಗೀತಾ ಶ್ಲೋಕ ಪಠಣ ಸ್ಪರ್ಧೆ
- ಯೋಗಾಸನ ಸ್ಪರ್ಧೆ
- ಭಾಷಣ ಸ್ಪರ್ಧೆ
- ಸಂಪೂರ್ಣ ವಂದೇಮಾತರಂ ಗಾಯನ
- ಭಜನಾ ಸ್ಪರ್ಧೆ
ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುವ ಪ್ರದರ್ಶನಗಳು ಮತ್ತು ಮಾರಾಟ ಮಳಿಗೆಗಳು.
ಅನಂತ ಉತ್ಸವದ ಪ್ರಯುಕ್ತ ಅಡುಗೆ ಮನೆ ಕೈತೋಟ ಹಾಗೂ ತಾರಸಿ ತೋಟ, ಮನೆಯ ಕಸದಿಂದ ಗೊಬ್ಬರ ತಯಾರಿಕೆ, ರಾಸಾಯನಿಕ ಮುಕ್ತ ಸಾಬೂನು ತಯಾರಿಕೆಯ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ.
ಆಸಕ್ತರು www.adamyachetana.org ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿದವರಿಗೆ ಮಾತ್ರ ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 99648 76365