Adamya Chetana

Sharva Creative

Green Sunday #481

Adamya Green #481 ಅದಮ್ಯ ಚೇತನದ ಹಸಿರು ಭಾನುವಾರ ಕಾರ್ಯಕ್ರಮ 480 ಭಾನುವಾರಗಳನ್ನು ದಾಟಿ ಮುನ್ನುಗ್ಗುತ್ತಿದೆ.ಶ್ರೀ ಅನಂತಕುಮಾರ್ ಅವರ ಕನಸಿನ “ಹಸಿರು ಭಾರತ” ಈ ಕಾರ್ಯಕ್ರಮದ ಮೂಲಕ ಹಚ್ಚ ಹಸಿರಾಗಿ ಉಳಿಯುತ್ತಿದೆ.ನಿನ್ನೆ, ಭವಾನಿ ಮಾನೆ ಕೆರೆಯ ಆವರಣದಲ್ಲಿ ಜರುಗಿದ 481ನೇಯ ಹಸಿರು ಭಾನುವಾರ ಕಾರ್ಯಕ್ರಮದ ಕೆಲ ವಿಶೇಷ ಛಾಯಾಚಿತ್ರಗಳು. ೧೦೦ಕ್ಕೂ ಹೆಚ್ಚು ಯುವಕ- ಯುವತಿಯರು ಭಾಗವಹಿಸಿದ್ದು ಪ್ರೇರಣದಾಯಿಯಾಗಿತ್ತು

Green Sunday #481 Read More »

Green Sunday #480

Adamya Green #480 ಅದಮ್ಯ ಚೇತನದ ೪೮೦ ನೇಯ ಹಸಿರು ಭಾನುವಾರ ಕಾರ್ಯಕ್ರಮ ಇಂದು ಅವಲಹಳ್ಳಿಯ ಶ್ರೀ ಪಟೇಲ್ ಗುಳ್ಳಪ್ಪ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ನಾಳೆಯ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಮ್ಮ ಜವಾಬ್ದಾರಿಯಲ್ಲಿ ನೀವೂ ಪಾಲ್ಗೊಳ್ಳಬಹುದು. ಮುಂದಿನ ಭಾನುವಾರ, ೧೬ ಮಾರ್ಚ್ ೨೦೨೫ ರಂದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಫಾಲೋ ಮಾಡಿ.

Green Sunday #480 Read More »

Green Sunday #479

Adamya Green #479 ಬಿಸಿಲು ಹೆಚ್ಚಾಗುತ್ತಿದೆ, ಮನೆಯಲ್ಲಿ ಎ.ಸಿ. ಕೂಲರ್ ಹಾಕಿಸುವ ನಾವು, ನಮ್ಮ ಬೆಂಗಳೂರಿನ ನೈಸರ್ಗಿಕ ಕೂಲರ್ ಗಳನ್ನು ಹೆಚ್ಚಿಸುವತ್ತ ಕೂಡ ಗಮನ ಹರಿಸಬೇಕಿದೆ. ಹಸಿರು ಹೆಚ್ಚಿಸಿ, ಪರಿಸರ ಸಂರಕ್ಷಿಸುವ ಶ್ರೀ ಅನಂತಕುಮಾರ್ ಅವರ ಆಶಯದ “ಹಸಿರು ಭಾನುವಾರ” ಕಾರ್ಯಕ್ರಮದ ಕ್ಷಣಗಳು.

Green Sunday #479 Read More »

Green Sunday #478

Adamya Green #478 ಅದಮ್ಯ ಚೇತನದ 478ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಸರ್ಕಾರಿ ಕನ್ನಡ – ಆಂಗ್ಲಪ್ರಾಥಮಿಕ ಶಾಲೆ, ಚಾಮರಾಜಪೇಟೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ಜರಗಿತು. ಹಸಿರು ಭಾನುವಾರದಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳ ಯಶಸ್ಸು, ಜನಸಾಮಾನ್ಯರ ಭಾಗವಹಿಸುವಿಕೆಯಲ್ಲಿದೆ. ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಇದು ಯಶಸ್ವಿಯಾಗಲಿದೆ.ಪರಿಸರ ಸಂರಕ್ಷಣೆ, ಶುದ್ಧ ಹಸಿರು ಪರಿಸರವನ್ನು ಉಳಿಸಿಕೊಳ್ಳುವುದು ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಈ ಕಾರ್ಯಕ್ರಮದಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #478 Read More »

Green Sunday#477

Adamya Green #477 ಅದಮ್ಯ ಚೇತನದ ೪೭೭ನೇ ಹಸಿರು ಭಾನುವಾರದ ಕ್ಷಣಗಳು… ಒಬ್ಬ ವ್ಯಕ್ತಿ ಉಸಿರಾಡಲು ೭ ಮರಗಳು ಬೇಕು, ಆದರೆ ನಮ್ಮ ಬೆಂಗಳೂರಿನಲ್ಲಿ ಇದರ ಅನುಪಾತ ತದ್ವಿರುದ್ಧವಾಗಿದೆ. ಶ್ರೀ ಅನಂತಕುಮಾರ್ ಅವರ ಆಶಯದಂತೆ ೧:೧ ಅನುಪಾತದಲ್ಲಿ ಮರ ಬೆಳೆಸುವ, ಹಸಿರು ಹೆಚ್ಚಿಸುವ ಪ್ರಯತ್ನ ನಮ್ಮದು. ನೀವೂ ಕೈ ಜೋಡಿಸಿ.

Green Sunday#477 Read More »

Green Sunday #476

Adamya Green #476 ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವತ್ತ ನಮ್ಮ ೪೭೬ನೇ ಹೆಜ್ಜೆ… ದಿ. ೯ ಫೇಬ್ರವರಿ, ೨೦೨೫ರಂದು ಬೆಂಗಳೂರು ವಿ.ವಿ. ಆವರಣದಲ್ಲಿ ಜರುಗಿದ ಅದಮ್ಯ ಚೇತನದ ೪೭೬ನೇ ಹಸಿರು ಭಾನುವಾರ

Green Sunday #476 Read More »

Green Sunday #475

Adamya Green #475 ಶ್ರೀ ಅನಂತಕುಮಾರ್ ಅವರು ಪ್ರಾರಂಭಿಸಿದ “ಹಸಿರು ಭಾನುವಾರ” ಕಾರ್ಯಕ್ರಮ ಇಂದು 475ನೇ ಮೆಟ್ಟಿಲು ಮುಟ್ಟಿ, ಮುಂದೆ ಸಾಗುತಿದೆ. ಪರಿಸರ ಸಂರಕ್ಷಣೆ, ಮುಂದಿನ ಪಿಳಿಗೆಗೆ ಉತ್ತಮ ಗಾಳಿ, ಶುದ್ಧ ನೀರು ಮತ್ತು ಫಲವತ್ತಾದ ಮಣ್ಣು ಒದಗಿಸುವ ಅದಮ್ಯ ಚೇತನದ ಅನೇಕ ಉಪಕ್ರಮಗಳಲ್ಲಿ ಹಸಿರು ಭಾನುವಾರವೂ ಒಂದು.

Green Sunday #475 Read More »

Green Sunday #474

Adamya Green #474 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಅದಮ್ಯ ಚೇತನದ 474ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಲುಮ್ನಿ ಅಸೋಸಿಯೇಷನ್ ​​ಆಫ್ ಯು ವಿ ಸಿ ಇ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಪೋಸ್ಟ್ ಆಫೀಸ್ ರಸ್ತೆ, ಕೆ. ಆರ್. ಸರ್ಕಲ್, ಸರ್ ಎಂ. ವಿಶೇಶ್ವರಯ್ಯ ಮೆಟ್ರೋ ನಿಲ್ದಾಣದ ಹತ್ತಿರ, ಬೆಂಗಳೂರು ಇಲ್ಲಿ ಸಂಭ್ರಮದಿಂದ ಯಶಸ್ವಿಯಾಗಿ ಜರಗಿತು. ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್ ಅವರು ಮಾತನಾಡಿ, ಪರಿಸರದ ಹಿತಕ್ಕಾಗಿ ‘ಹಸಿರು ಭಾನುವಾರ’ ಕಾರ್ಯಕ್ರಮವು ಒಂದು ಮಾದರಿ ಕಾರ್ಯಕ್ರಮವಾಗಿದೆ.

Green Sunday #474 Read More »

Green sunday #473

Adamya Green #473 ಜನವರಿ 19, 2025 ರಂದು ಅದಮ್ಯ ಚೇತನದ 473ನೇ ಹಸಿರು ಭಾನುವಾರ ಕಾರ್ಯಕ್ರಮವು ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಂಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ ಇಡಲಾಯಿತು. ನಾಡಿನ ಹಸಿರು ಸಂಸ್ಕೃತಿಯನ್ನು ಹೆಚ್ಚಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಪರಿಸರ ಸ್ನೇಹಿ ಕಾರ್ಯಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು

Green sunday #473 Read More »

Green Sunday #472

Adamya Green #472 9ನೇ ವರ್ಷದ ಹಸಿರು ಭಾನುವಾರ – ಯಶಸ್ವಿ ಆಚರಣೆ 2025 ರ ಅದಮ್ಯ ಚೇತನ ಅನಂತ ಸೇವಾ ಉತ್ಸವದ ಪ್ರಯುಕ್ತ ಜನವರಿ 12 ರಂದು, ಅದಮ್ಯ ಚೇತನದ 472ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರು, ಜಯನಗರದ ಎಂಇಎಸ್ ಮೈದಾನದಲ್ಲಿ ಯಶಸ್ವಿಯಾಗಿ ಜರಗಿತು. 2016 ರ ಸೇವಾ ಉತ್ಸವದಲ್ಲಿ ಪ್ರಾರಂಭವಾದ ಹಸಿರು ಭಾನುವಾರ ಕಾರ್ಯಕ್ರಮವು, ಪರಿಸರ ಸಂರಕ್ಷಣೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿ, 2025 ರಲ್ಲಿ 9ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಕಾರ್ಯಕ್ರಮವು ಪ್ರತೀ ಭಾನುವಾರ

Green Sunday #472 Read More »