Green Sunday #417
Adamya Green #417 ಅದಮ್ಯ ಚೇತನದ 417 ನೇ ಹಸಿರು ಭಾನುವಾರ ಕಾರ್ಯಕ್ರಮವು 2023ರ ಡಿ. 24 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಮಾರಗೊಂಡನಹಳ್ಳಿ ಕೆರೆಯ ಬದಿ ಯಶಸ್ವಿಯಾಗಿ ಜರುಗಿತು. ವಿವಿಧ ಜಾತಿಯ 50 ಗಿಡಗಳನ್ನು ನೆಡಲಾಯಿತು. ಈ ಹಿಂದೆ ಇದೇ ಆವರಣದಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಬೆಂಗಳೂರಿನ ಬಿಎಂಎಸ್ ಕಾಲೇಜು, ಎನ್. ಎಸ್. ಎಸ್ ನ ವಿದ್ಯಾರ್ಥಿಗಳು, ಗ್ರೀನ್ ವಾಲೆಂಟಿಯರ್ಸ್ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.