Adamya Chetana

2023

Swachhata Hi Sewa

Adamya Green Swachhata Hi Sewa ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ಅದಮ್ಯ ಚೇತನ ಸಂಸ್ಥೆಯಿಂದ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಬಳಿಯ ಅನಂತವನ ಆವರಣದಲ್ಲಿ ಅ. 2ರಂದು ಸೋಮವಾರ ಸ್ವಚ್ಛತೆಯ ಶ್ರಮದಾನ ಸೇವೆಯನ್ನು ಕೈಗೊಳ್ಳಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಮೊದಲಾದವರು ಪಾಲ್ಗೊಂಡಿದ್ದರು.

Green Sunday #405

Adamya Green #405 ಅದಮ್ಯ ಚೇತನದ 405 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 01-10-2023 ರಂದು ಬೆಂಗಳೂರಿನ ಸರ್ಜಾಪುರ-ಆನೇಕಲ್ ರಸ್ತೆಯ ಮುತ್ತನಲ್ಲೂರು ಗ್ರಾಮದ ದೇವರಕೆರೆಯ ಆವರಣದಲ್ಲಿ ಆಚರಿಸಲಾಯಿತು. ನಾನಾ ಜಾತಿಯ ಹಲವಾರು ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್‌, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಸ್ವಯಂ ಸೇವಾ ಕಾರ್ಯಕರ್ತರು ಮೊದಲಾದವರು ಭಾಗಿಯಾಗಿದ್ದರು.

Green Sunday #404

Adamya Green #404 ಅದಮ್ಯ ಚೇತನ ಹಾಗೂ ವೋಲ್ವೋ ಗ್ರುಪ್‌ ಇಂಡಿಯಾ ಪ್ರೈ. ಲಿ. ನ ಸಹಯೋಗದೊಂದಿಗೆ 404 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 24-09-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ. ಎಫ್. ಲೇಔಟ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಸಸ್ಯಾಗ್ರಹದ ರೂವಾರಿ ಶ್ರೀ ಅನಂತಕುಮಾರ್‌ ಅವರ 64 ನೇ ಜನ್ಮದಿನದ ಪ್ರಯುಕ್ತ 64 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅದಮ್ಯ ಚೇತನದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ವೋಲ್ವೋ …

Green Sunday #404 Read More »

Green Sunday #403

Adamya Green #403 ಅದಮ್ಯ ಚೇತನದ‌‌ 403 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 17-09-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ. ಎಫ್. ಲೇಔಟ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮ‌ ದಿನದ ಪ್ರಯುಕ್ತ ನಾನಾ ಜಾತಿಯ 20 ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಯುತ್‌ ಫಾರ್‌ ಸೇವಾ ಸಂಸ್ಥೆ , ಸೊಸೈಟಿ ಜನರಲ್‌, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಸ್ಥೆಯ ಸ್ವಯಂ ಸೇವಕರು ಮೊದಲಾದವರು ಭಾಗವಹಿಸಿದ್ದರು

Green Sunday #402

Adamya Green #402 ಅನಂತಕುಮಾರ್‌ ಪ್ರತಿಷ್ಠಾನ ಸಂಸ್ಥೆಯ ಸಹಯೋಗದೊಂದಿಗೆ, ಅದಮ್ಯ ಚೇತನ ಸಂಸ್ಥೆಯು ಹಾರೋಹಳ್ಳಿ ತಾಲೂಕಿನ ಚಿಕ್ಕಮರಳವಾಡಿ ಗ್ರಾಮದಲ್ಲಿ 2023 ರ ಸೆಪ್ಟೆಂಬರ್‌ 10 ರಂದು 402 ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ನಾನಾ ಜಾತಿಯ 40 ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಶ್ರೀ ಗುಡ್ಡು ಇನಾಂದಾರ್‌, ಶ್ರೀ ಜನಾರ್ದನ ತುಂಗ , ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಸ್ಥೆಯ ಸ್ವಯಂ ಸೇವಕರು ಹಾಗೂ ಸ್ಥಳೀಯರು …

Green Sunday #402 Read More »

Green Sunday #401

Adamya Green #401 ‘ಹಸಿರು ಭಾನುವಾರ’ದ ಸಾಧನೆಗೆ 401ನೇ ಗರಿಪರಿಸರ ಸಂರಕ್ಷಣೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದು ‘ಜೀವನದ ವ್ರತ’ ಎಂಬಂತೆ ಪಾಲಿಸಿಕೊಂಡು ಬರುತ್ತಿರುವ ಅದಮ್ಯ ಚೇತನ ಸಂಸ್ಥೆಯ ‘ಹಸಿರು ಭಾನುವಾರ’ದ ಕಾರ್ಯಕ್ರಮವು, 2023ರ ಸೆ. 3ರಂದು ‘401ನೇ ವಾರ’ದಲ್ಲಿ ತನ್ನ ದಿಟ್ಟ ಹೆಜ್ಜೆ ಮೂಡಿಸಿ, ಸಾಧನೆಯ ಮುಡಿಗೆ ಅಭಿಮಾನದ ಗರಿ ಸಿಕ್ಕಿಸಿಕೊಂಡಿತು.ಮಾತ್ರವಲ್ಲ; ಸಾಮಾಜಿಕ ಕಳಕಳಿಯ ಯಾವುದೇ ಯೋಜನೆಯನ್ನು ನಿರಂತರವಾಗಿ ಕಾರ್ಯಗತಗೊಳಿಸುವ ಸಂಕಲ್ಪ ಶಕ್ತಿಗೆ ‘ಉತ್ತಮ‌ ಮಾದರಿ’ ಎಂಬುದನ್ನು ಸಾಬೀತುಪಡಿಸಿ, ಸಾರ್ವಜನಿಕ ವಲಯದಲ್ಲಿ ಪರಿಸರ ಸಂರಕ್ಷಣೆಯ ಪ್ರೇರಣೆಗೂ …

Green Sunday #401 Read More »

Green Sunday #400

Adamya Green #400 ಹಸಿರು ಜೀವನ ಶೈಲಿ ಅಗತ್ಯ, ಅನಿವಾರ್ಯತೆ ಪ್ರತಿಪಾದಿಸಿದ ‘400ನೇ ಹಸಿರು ಭಾನುವಾರ’2023ರ ಆಗಸ್ಟ್ 27, ಭಾನುವಾರದಂದು, ಬೆಂಗಳೂರಿನ ಜಯನಗರ 5ನೇ ಹಂತದ ಎಂ.ಇ.ಎಸ್. ಮೈದಾನವು (ದೂರವಾಣಿ ವಿನಿಮಯ ಕೇಂದ್ರ ಎದುರು) ಎಂದಿನಂತಿರಲಿಲ್ಲ. ಪರಿಸರ ಸಂರಕ್ಷಣೆಯ ಮೂಲಕ ಸಾರ್ವಜನಿಕರಲ್ಲಿ ಹಸಿರು ಪ್ರೀತಿ ಹೆಚ್ಚಿಸುವ ಐತಿಹಾಸಿಕ ಸಮಾರಂಭಕ್ಕೆ ಇಡೀ ದಿನ (‘ಊಟ ಫ್ರಾಮ್ ತೋಟ’ದ 43ನೇ ಆವೃತ್ತಿ ಹಾಗೂ ಅದಮ್ಯ ಚೇತನದ 400ನೇ ಹಸಿರು ಭಾನುವಾರ) ಸಾಕ್ಷಿಯಾಯಿತು‌.ಅದಮ್ಯ ಚೇತನ, ಊಟ ಫ್ರಾಮ್ ತೋಟ ಹಾಗೂ ಗಾರ್ಡನ್ …

Green Sunday #400 Read More »

Green Sunday #399

Adamya Green #399 ʻಗಿವ್‌ ಮಿ ಟ್ರೀಸ್‌ʼ ಸಂಸ್ಥೆಯ ಸಹಯೋಗದೊಂದಿಗೆ ಅದಮ್ಯ ಚೇತನ ಸಂಸ್ಥೆಯು ಬೆಂಗಳೂರಿನ ಗೊಪ್ಪಸಂದ್ರದ ದೇವರ ಕೆರೆಯ ಆವರಣದಲ್ಲಿ 2023ರ ಆಗಸ್ಟ್‌ 20ರಂದು 399 ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. 150 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ಕೊಮ್ಮಸಂದ್ರದ ವರ್ತೂರು ʻಪರ್ಯಾವರಣʼದ ಪ್ರಮುಖ ಶ್ರೀ ವಿ ಮುನಿರಾಜು, ಕೊಮ್ಮಸಂದ್ರದ ಆರ್‌.ಎಸ್‌.ಎಸ್‌. ಮುಖ್ಯ ಶಿಕ್ಷಕ ಶ್ರೀ ಕೆ.ವಿ. ಪುಟ್ಟರಾಜು, ಚಿಕ್ಕತಿಮ್ಮಸಂದ್ರ ಗ್ರಾಮ ಪಂಚಾಯತ್‌ ಸದಸ್ಯ …

Green Sunday #399 Read More »

Green Sunday #398

Adamya Green #398 ಅದಮ್ಯ ಚೇತನದ 398 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 13-08-2023 ರಂದು ಕೆಂಗೇರಿ ಬಳಿ ಇರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠದ ಆವರಣದಲ್ಲಿ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮಿಜೀ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. 50 ನಾನಾ ಜಾತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅದಮ್ಯ ಚೇತನದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ , ಕಿರಿಯ ಸ್ವಾಮೀಜಿಗಳಾದ ಶ್ರೀ ರಮಣಾನಂದನಾಥ ಸ್ವಾಮಿಜೀ, ಜಪಾನಿನ ಟೋರು ಹೊಮ್ಮಾ, ಕೈಟಾ …

Green Sunday #398 Read More »

Green Sunday #397

Adamya Green #397 ಅದಮ್ಯ ಚೇತನ, ವಾಸವಿ ಸೇವಾ ಸಮಿತಿ ಹಾಗೂ ಸಮಾನ ಮನಸ್ಕ ಗೆಳೆಯರ ಬಳಗದ ಸಹಯೋಗದೊಂದಿಗೆ ದಿ. 06-08-2023 ರಂದು 397 ನೇ ಹಸಿರು ಭಾನುವಾರ ಕಾರ್ಯಕ್ರಮವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೋಲಾರದ ಅಂತರಗಂಗೆ ಪುಣ್ಯಕ್ಷೇತ್ರದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ನಾನಾ ಜಾತಿಯ 60 ಹಣ್ಣಿನ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ವಾಸವಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಲಯನ್ ಶಿವ …

Green Sunday #397 Read More »