Adamya Chetana

Adamya Green #469

ಅದಮ್ಯ ಚೇತನದ 469ನೇ ಹಸಿರು ಭಾನುವಾರ ಕಾರ್ಯಕ್ರಮವು ಡಿಸೆಂಬರ್ 22 ರಂದು ಬೆಂಗಳೂರಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಹತ್ತಿರವಿರುವ ಸುಲ್ತಾನ್ ಪೆಟ್ ನ ಸರ್ಕಾರಿ ಉರ್ದು ಮಿಡಲ್ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಎಂದಿನಂತೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ, ಗಿಡಗಳನ್ನು ನೆಟ್ಟು, ಪರಿಸರವನ್ನು ಆರೋಗ್ಯಕರ ಮತ್ತು ಹಸಿರು ಭರಿತವಾಗಿಡುವ ಕಾರ್ಯದಲ್ಲಿ ಎಲ್ಲರು ಉತ್ಸಾಹದಿಂದ ಭಾಗವಹಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.