Adamya Chetana

Adamya Green #472

9ನೇ ವರ್ಷದ ಹಸಿರು ಭಾನುವಾರ – ಯಶಸ್ವಿ ಆಚರಣೆ

2025 ರ ಅದಮ್ಯ ಚೇತನ ಅನಂತ ಸೇವಾ ಉತ್ಸವದ ಪ್ರಯುಕ್ತ ಜನವರಿ 12 ರಂದು, ಅದಮ್ಯ ಚೇತನದ 472ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರು, ಜಯನಗರದ ಎಂಇಎಸ್ ಮೈದಾನದಲ್ಲಿ ಯಶಸ್ವಿಯಾಗಿ ಜರಗಿತು.

2016 ರ ಸೇವಾ ಉತ್ಸವದಲ್ಲಿ ಪ್ರಾರಂಭವಾದ ಹಸಿರು ಭಾನುವಾರ ಕಾರ್ಯಕ್ರಮವು, ಪರಿಸರ ಸಂರಕ್ಷಣೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿ, 2025 ರಲ್ಲಿ 9ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಕಾರ್ಯಕ್ರಮವು ಪ್ರತೀ ಭಾನುವಾರ ಸಸಿ ನೆಡುವ, ಪರಿಸರ ಜಾಗೃತಿ ಮೂಡಿಸುವ ಮತ್ತು ಸಮುದಾಯದೊಂದಿಗೆ ಕೈ ಜೋಡಿಸುವ ಮೂಲಕ ಸತತ ಪರಿಸರ ಪ್ರಜ್ಞೆಯ ಪರಿವರ್ತನೆಯನ್ನು ತರಲು ಶ್ರಮಿಸುತ್ತಿದೆ.

ಹಸಿರು ಯೋಧರು, ಸ್ವಯಂಸೇವಕರು ಹಾಗೂ ಸ್ಥಳೀಯರ ಸಹಕಾರದಿಂದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವು ಪ್ರತಿಯೊಬ್ಬರ ಹೃದಯದಲ್ಲಿ ಹಸಿರು ಕನಸುಗಳನ್ನು ಬೆಳೆಸುತ್ತಿದೆ.

ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.