Adamya Chetana

Food for Needy
ಹಸಿದವರಿಗೆ ಆಹಾರ

Food for the hungry:

Adamya Chetana has been serving food to the hungry in association with the state government. The poor, middle class, labourers and other citizens are served food at subsidized rates. Breakfast, lunch and dinner is served every day across 44 centres in Bengaluru. Thousands make use of this facility every day.

Our Poura Karmikas (Safai Karmacharis) played an important part in protecting the society during COVID risking their own lives. Adamya Chetana, in association with the state government is supplying hot, tasty and nutritious mid-day meals to about 14,000 Poura karmikas from 330 centres. All these Poura karmikas have also been provided stainless steel plates for the meals to reduce garbage.

ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅದಮ್ಯ ಚೇತನ ಸಂಸ್ಥೆಯು ಹಸಿದವರಿಗೆ ಆಹಾರ ಯೋಜನೆಯನ್ನು ನಡೆಸಿಕೊಂಡು ಬರುತ್ತಿದೆ. ಬಡವರು, ಮಧ್ಯಮ ವರ್ಗದವರು, ಕೂಲಿಕಾರ್ಮಿಕರು ಮತ್ತಿತರ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಊಟ ಒದಗಿಸಲಾಗುತ್ತಿದೆ. ಬೆಂಗಳೂರಿನ ಸುಮಾರು ೪೪ ಕೇಂದ್ರಗಳಿAದ ಪ್ರತಿದಿನ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ನಮ್ಮ ಪೌರಕಾರ್ಮಿಕರು. ರಾಜ್ಯಸರ್ಕಾರದ ಸಹಯೋಗದೊಂದಿಗೆ ಪ್ರತಿದಿನ ಮಧ್ಯಾಹ್ನ ರುಚಿ-ಶುಚಿಯಾದ ಊಟವನ್ನು ಒದಗಿಸಲಾಗುತ್ತಿದೆ. ಈ ಸೇವೆಯನ್ನು ಸುಮಾರು ೧೪,೦೦೦ ಪೌರಕಾರ್ಮಿಕರಿಗೆ ೩೩೦ ಕೇಂದ್ರಗಳಿಂದ ಒದಗಿಸಲಾಗುತ್ತಿದೆ. ಎಲ್ಲಾ ಪೌರಕಾರ್ಮಿಕರಿಗೂ ಊಟ ಮಾಡಲು ತಟ್ಟೆಯನ್ನು ಸಹ ಒದಗಿಸಲಾಗಿದೆ.