Adamya Chetana

Green Sunday #354

Adamya Green #388

ಅದಮ್ಯ ಚೇತನದ 388ನೇ ಹಸಿರು ಭಾನುವಾರ ಕಾರ್ಯಕ್ರಮ ಜೂನ್‌ 4ರಂದು ಬೆಂಗಳೂರು ವಿವಿಯ ಎನ್‌ಎಸ್‌ಎಸ್‌ ಭವನದ ಹಿಂಭಾಗದ ಬಿಯು ಬಯೋ-ಪಾರ್ಕಿನಲ್ಲಿ ಆಯೋಜನೆ ಮಾಡಲಾಗಿತ್ತು. 25 ನೇರಳೆ, 25 ಬೆಟ್ಟದ ನೆಲ್ಲಿಕಾಯಿ, 20 ಬಾದಾಮಿ, 10 ಹಲಸು ಹಾಗೂ 10 ಪನ್ನೇರಳೆ ಗಿಡಗಳನ್ನು ನೆಡಲಾಯಿತು.
ಈ ಹಸಿರು ಕಾರ್ಯಕ್ಕೆ ಗ್ಲೋಬಲ್‌ ಕಾಲೇಜು, ಬಿಎಂಎಸ್‌ ಕಾಲೇಜು, ನೃಪತುಂಗ ಯೂನಿರ್ವಸಿಟಿ, ಕಳಿಂಗ ಇಂಡಸ್‌ ಟೆಕ್‌, ಯೂಥ್ ಫಾರ್ ಸೇವಾ, ಯುವಿಸಿಇ ಮತ್ತು ಅದಮ್ಯ ಚೇತನ ಸ್ವಯಂ ಕಾರ್ಯಕರ್ತರು ಸೇರಿ ಒಟ್ಟು 260 ಜನ ಭಾಗಿಯಾಗಿದ್ದರು.