ಜೂನ್ 18ರಂದು ನಡೆದ 390ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ವಿಶ್ವವಿದ್ಯಾಲಯದ ಎನ್‌ಜಿಇಎಫ್ ಬಯೋ ಪಾರ್ಕ್‌ನಲ್ಲಿ ನಡೆಯಿತು. 10 ಹೊಂಗೆ, 10 ಕಾಡು ಬಾದಾಮಿ ಗಿಡಗಳನ್ನು ನೆಡುವುದರ ಜೊತೆಗೆ, ಆವರಣದ ಸ್ವಚ್ಛತಾ ಕಾರ್ಯ ಸಹ ಮಾಡಲಾಯಿತು. ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಕುಮಾರನ್ ಸ್ಕೂಲ್ ವಿದ್ಯಾರ್ಥಿಗಳು, ಯೂಥ್ ಫಾರ್ ಸೇವಾ ಹಾಗೂ ಹಸಿರು ಸ್ವಯಂ ಸೇವಕರು ಸೇರಿ 80 ಜನ ಈ ಒಂದು ಗ್ರೀನ್ ಸಂಡೆಯಲ್ಲಿ ಭಾಗವಹಿಸಿದ್ದರು.