Adamya Chetana

Adamya Green #399

ʻಗಿವ್‌ ಮಿ ಟ್ರೀಸ್‌ʼ ಸಂಸ್ಥೆಯ ಸಹಯೋಗದೊಂದಿಗೆ ಅದಮ್ಯ ಚೇತನ ಸಂಸ್ಥೆಯು ಬೆಂಗಳೂರಿನ ಗೊಪ್ಪಸಂದ್ರದ ದೇವರ ಕೆರೆಯ ಆವರಣದಲ್ಲಿ 2023ರ ಆಗಸ್ಟ್‌ 20ರಂದು 399 ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. 150 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ಕೊಮ್ಮಸಂದ್ರದ ವರ್ತೂರು ʻಪರ್ಯಾವರಣʼದ ಪ್ರಮುಖ ಶ್ರೀ ವಿ ಮುನಿರಾಜು, ಕೊಮ್ಮಸಂದ್ರದ ಆರ್‌.ಎಸ್‌.ಎಸ್‌. ಮುಖ್ಯ ಶಿಕ್ಷಕ ಶ್ರೀ ಕೆ.ವಿ. ಪುಟ್ಟರಾಜು, ಚಿಕ್ಕತಿಮ್ಮಸಂದ್ರ ಗ್ರಾಮ ಪಂಚಾಯತ್‌ ಸದಸ್ಯ ವೇಣು, ಮುತ್ತನಲ್ಲೂರಿನ ಗ್ರೀನ್‌ ಟ್ರೀ ಪ್ರಭಾರಿ ಸದಸ್ಯ ಶ್ರೀ ಕುಮಾರ್‌, ಸಮಾಜ ಸೇವಕಿ ರಾಧಮ್ಮ, ಬಿ. ಎಮ್‌. ಎಸ್‌ ಕಾಲೇಜಿನ ವಿದ್ಯಾರ್ಥಿಗಳು, ʻಗಿವ್‌ ಮೀ ಟ್ರೀಸ್ʼ ಸಂಸ್ಥೆಯ ಸ್ವಯಂ ಸೇವಕರು ಹಾಗೂ ಸ್ಥಳೀಯರು ಮೊದಲಾದವರು ಭಾಗವಹಿಸಿದ್ದರು.