Adamya Chetana

Adamya Green #402

ಅನಂತಕುಮಾರ್‌ ಪ್ರತಿಷ್ಠಾನ ಸಂಸ್ಥೆಯ ಸಹಯೋಗದೊಂದಿಗೆ, ಅದಮ್ಯ ಚೇತನ ಸಂಸ್ಥೆಯು ಹಾರೋಹಳ್ಳಿ ತಾಲೂಕಿನ ಚಿಕ್ಕಮರಳವಾಡಿ ಗ್ರಾಮದಲ್ಲಿ 2023 ರ ಸೆಪ್ಟೆಂಬರ್‌ 10 ರಂದು 402 ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ನಾನಾ ಜಾತಿಯ 40 ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಶ್ರೀ ಗುಡ್ಡು ಇನಾಂದಾರ್‌, ಶ್ರೀ ಜನಾರ್ದನ ತುಂಗ , ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಸ್ಥೆಯ ಸ್ವಯಂ ಸೇವಕರು ಹಾಗೂ ಸ್ಥಳೀಯರು ಮೊದಲಾದವರು ಉಪಸ್ಥಿತರಿದ್ದರು.