ಅದಮ್ಯ ಚೇತನದ 403 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 17-09-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ. ಎಫ್. ಲೇಔಟ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಜನ್ಮ ದಿನದ ಪ್ರಯುಕ್ತ ನಾನಾ ಜಾತಿಯ 20 ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಯುತ್ ಫಾರ್ ಸೇವಾ ಸಂಸ್ಥೆ , ಸೊಸೈಟಿ ಜನರಲ್, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಸಂಸ್ಥೆಯ ಸ್ವಯಂ ಸೇವಕರು ಮೊದಲಾದವರು ಭಾಗವಹಿಸಿದ್ದರು