Adamya Chetana

Adamya Green #404

ಅದಮ್ಯ ಚೇತನ ಹಾಗೂ ವೋಲ್ವೋ ಗ್ರುಪ್‌ ಇಂಡಿಯಾ ಪ್ರೈ. ಲಿ. ನ ಸಹಯೋಗದೊಂದಿಗೆ 404 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿನಾಂಕ 24-09-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ. ಎಫ್. ಲೇಔಟ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಸಸ್ಯಾಗ್ರಹದ ರೂವಾರಿ ಶ್ರೀ ಅನಂತಕುಮಾರ್‌ ಅವರ 64 ನೇ ಜನ್ಮದಿನದ ಪ್ರಯುಕ್ತ 64 ನಾನಾ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಅದಮ್ಯ ಚೇತನದ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ವೋಲ್ವೋ ಗ್ರುಪ್‌ ನ ಅಧಿಕಾರಿಗಳು, ಉದ್ಯೋಗಿಗಳು, ಕಲ್ಪವೃಕ್ಷ ಸಂಸ್ಥೆಯ ಮಕ್ಕಳು, ಯುತ್‌ ಫಾರ್‌ ಸೇವಾ ಸಂಸ್ಥೆ ಯ ಕಾರ್ಯಕರ್ತರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸ್ವಯಂ ಸೇವಾ ಕಾರ್ಯಕರ್ತರು ಮೊದಲಾದವರು ಭಾಗಿಯಾಗಿದ್ದರು.