ಅದಮ್ಯ ಚೇತನದ 407 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 16-10-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ. ಎಫ್. ಲೇಔಟ್ ಬಯೋ ಪಾರ್ಕ್ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 10 ಗಿಡಗಳನ್ನು ನೆಡಲಾಯಿತು. ಕಳೆದ ವರ್ಷ ಪಬ್ಲಿಕ್ ಟಿ. ವಿ ಸಹಯೋಗದೊಂದಿಗೆ ನೆಟ್ಟಿದ್ದ 1000 ಗಿಡಗಳಡಿಯ ಕಳೆ ತೆಗೆದು, ಗಿಡಗಳಿಗೆ ಗೊಬ್ಬರ ಹಾಕಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಸೊಸೈಟಿ ಜನರಲ್, ಯೂಥ್ ಫಾರ್ ಸೇವಾ, ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು, ಎನ್ಎಸ್ಎಸ್ ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.