ಬೆಂಗಳೂರಿನ 4ನೇ ಬ್ಲಾಕ್ ನ 32ನೇ ʻಸಿʼ ಕ್ರಾಸ್ ನಲ್ಲಿರುವ ಶ್ರೀ ಕೃಷ್ಣ ಸೇವಾಶ್ರಮ ಬಳಿ ಅದಮ್ಯ ಚೇತನ ಸಂಸ್ಥೆ ವತಿಯಿಂದ ಅ. 29ರಂದು 409ನೇ ಹಸಿರು ಭಾನುವಾರ ಜರುಗಿತು. ಯುತ್ ಫಾರ್ ಸೇವಾ, ಸೊಸೈಟಿ ಜನರಲ್, ಬಿಎಂಎಸ್ ಕಾಲೇಜು ಹಾಗೂ ಕ್ರೈಸ್ತ ಕಾಲೇಜು ವಿದ್ಯಾರ್ಥಿಗಳು, ಸಂಸ್ಥೆಯ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ನಾನಾ ಜಾತಿಯ 15 ಗಿಡಗಳನ್ನು ನೆಡಲಾಯಿತು.