Adamya Chetana

Adamya Green #410

ಅದಮ್ಯ ಚೇತನದ 410 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 06-11-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್. ಜಿ. ಇ. ಎಫ್. ಲೇಔಟ್ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 10 ಗಿಡಗಳನ್ನು ನೆಡಲಾಯಿತು. ಈ ಹಿಂದೆ ನೆಟ್ಟಿದ್ದ ಗಿಡಗಳಡಿಯ ಕಳೆ ತೆಗೆದು, ಗಿಡಗಳಿಗೆ ನೀರು ಹಾಕಲಾಯಿತು. ಈ ಸಂದರ್ಭದಲ್ಲಿ ಕಲ್ಪವೃಕ್ಷ ಚಾರಿಟೇಬಲ್‌ ಸಂಸ್ಥೆಯ ಮಕ್ಕಳು, ಸೊಸೈಟಿ ಜನರಲ್, ಯೂಥ್ ಫಾರ್ ಸೇವಾ, ಬಿಎಂಎಸ್‌ ಕಾಲೇಜು, ಕ್ರೈಸ್ಟ್‌ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಸ್ವಯಂ ಸೇವಕರು ಮೊದಲಾದವರು ಪಾಲ್ಗೊಂಡಿದ್ದರು.