ಬೆಂಗಳೂರಿನ ಅಂಜನಾಪುರ-ಅವಲಹಳ್ಳಿ ಕೆರೆ ದಡದಲ್ಲಿ ( ನಂದಿನಿ ಗಾರ್ಡನ್ ಅಪಾರ್ಟ್ ಮೆಂಟ್ ಬಳಿ) 411ನೇ ಹಸಿರು ಭಾನುವಾರ ಹಾಗೂ ಶ್ರೀ ಅನಂತಕುಮಾರರ ಪುಣ್ಯತಿಥಿ ನಿಮಿತ್ತ 2023ರ ನ. 12ರಂದು ಅದಮ್ಯ ಚೇತನ ಸಂಸ್ಥೆಯ ವತಿಯಿಂದ ನಾನಾ ಜಾತಿಯ 50 ಗಿಡಗಳನ್ನು ನೆಡಲಾಯಿತು. ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು, ಯೂತ್ ಫಾರ್ ಸೇವಾ, ಗ್ರೀನ್ ವಾಲೆಂಟಿಯರ್ಸ್ ಸಂಸ್ಥೆಯ ಸದಸ್ಯರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.