ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್ ಬಳಿಯ ಎನ್ ಎಸ್‌ಎಸ್ ಭವನ ಸಮೀಪ ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ ಹಸಿರು ಭಾನುವಾರದ 432ನೇ ಕಾರ್ಯಕ್ರವನ್ನು 2024ರ ಏಪ್ರಿಲ್ 07 ರಂದು ಹಮ್ಮಿಕೊಳ್ಳಲಾಗಿತ್ತು. ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಬಿಎಂಎಸ್ ಕಾಲೇಜು ಹಾಗೂ ನೃಪತುಂಗ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ ಸ್ವಯಂಸೇವಾ ಕಾರ್ಯಕರ್ತರು ಸೇರಿ ಒಟ್ಟು 100ಕ್ಕೂ ಅಧಿಕ ಪರಿಸರ ಸ್ನೇಹಿಗಳು ಪಾಲ್ಗೊಂಡಿದ್ದರು.