Adamya Chetana

Adamya Green #440

ಬೆಂಗಳೂರು ವಿ.ವಿ. ವ್ಯಾಪ್ತಿಯ ಬಯೋ-ಪಾರ್ಕ್‌ನ ಗಾಂಧಿಭವನ ಆವರಣದಲ್ಲಿ 02-06-2024ರಂದು ಅದಮ್ಯ ಚೇತನ ಸಂಸ್ಥೆಯ ಹಸಿರು ಭಾನುವಾರದ 440ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಾತಿಯ 25 ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ʻಕೆಚ್ಚೆದೆಯ ಕನ್ನಡತಿ ʼ ಪ್ರಶಸ್ತಿ ಖ್ಯಾತಿಯ ಅನು ಅಕ್ಕ ಅವರು ಸಸ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪಿಇಎಸ್‌ ಕಾಲೇಜು, ನೃಪತುಂಗ ಕಾಲೇಜು, ಬಿಎಂಎಸ್‌ ಕಾಲೇಜು ವಿದ್ಯಾರ್ಥಿಗಳು, ಅದಮ್ಯ ಚೇತನದ ಸ್ವಯಂ ಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.