Adamya Green #439
ಬೆಂಗಳೂರಿನ ಜ್ಞಾನಭಾರತಿ ವ್ಯಾಪ್ತಿಯ ವ್ಯಕ್ತಿಯ ಕೆಂಗೇರಿ ಉಪನಗರದ ಶ್ರೀ ಸಿದ್ಧವಿನಾಯಕ ದೇವಸ್ಥಾನ, ಕೆಬಿಎಚ್ ಪ್ಲಾಟಿನಂ ಅಪಾರ್ಟ್‌ಮೆಂಟ್ ಹಿಂಭಾಗ 26-05-2024 ರಂದು ಅದಮ್ಯ ಚೇತನ ಸಂಸ್ಥೆಯ ಹಸಿರು ಭಾನುವಾರದ 439ನೇ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಜಾತಿಯ ಒಟ್ಟು 108 ಗಿಡಗಳನ್ನು ನೆಟ್ಟು, ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಪರ್ಯಾವರಣ ಸಂರಕ್ಷಣ ಪ್ರಾಂತ ಸಂಯೋಜಕ ಶ್ರೀ ಜಯರಾಮ ಬೊಲ್ಲಾಜೆ, ರಾಮಮೂರ್ತಿ ಬೈರಿ ಜೀ, ದೀಪಕ್ ಜೀ, ನಾಗೇಶ್ ಹೆಗಡೆ, ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಓಷಿಯಾನಿಕ್ ಎಜ್ಯಕೇಶನ್ ಸೊಸೈಟಿ, ನೃಪತುಂಗ ವಿ.ವಿ, ಅದಮ್ಯ ಚೇತನದ ಸ್ವಯಂ ಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.