Adamya Green #444
ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಶುಭ ವರ್ಷ ದಂಗವಾಗಿ 2024ರ ಜೂನ್ 30 ರಂದು ಅದಮ್ಯ ಚೇತನ ಸಂಸ್ಥೆಯು ತನ್ನ ಅಭಿಮಾನದ 444ನೇ ಹಸಿರು ಭಾನುವಾರದ ಕಾರ್ಯಕ್ರಮವನ್ನು ಬೆಂಗಳೂರಿನ ಶಂಕರಪುರದ ಶಂಕರಮಠದಲ್ಲಿ ಆಚರಿಸಿತು. ಸುವರ್ಣ ಭಾರತೀ ವೃಕ್ಷಾರೋಪಣ ಕಾರ್ಯಕ್ರಮ ದ ಸಹಯೋಗದಲ್ಲಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಮಾರ್ಗದರ್ಶನದಲ್ಲಿ ವಿವಿಧ ಜಾತಿಯ ಹೂವಿನ ಹಾಗೂ ಹಣ್ಣಿನ 50 ಗಿಡಗಳನ್ನು ನೆಡುವ ಮೂಲಕ 444ನೇ ಹಸಿರು ಭಾನುವಾರವನ್ನು ಯಶಸ್ವಿಗೊಳಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಸೇರಿದಂತೆ ಸುಮಾರು 80ಕ್ಕೂ ಅಧಿಕ ಪರಿಸರ ಆಸಕ್ತರು ಉಪಸ್ಥಿತರಿದ್ದರು.