ಕನಕಪುರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚಿಕ್ಕಮರಳವಾಡಿ ಗ್ರಾಮ ವ್ಯಾಪ್ತಿಯಲ್ಲಿ ಅದಮ್ಯ ಚೇತನ ಸಂಸ್ಥೆಯು 2024ರ ಜು.07ರಂದು 445ನೇ ʻಹಸಿರು ಭಾನುವಾರʼವನ್ನು ಆಯೋಜಿಸಿತ್ತು. ವಿವಿಧ ಜಾತಿಯ ಹಣ್ಣುಗಳ 12 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶ್ರೀಮತಿ ಪ್ರತಿಭಾ ಓಕ್, ಶ್ರೀ ಜಿ.ಎಂ. ಇನಾಂದಾರ್, ರೋಟರ್ಯಾಕ್ಟ್ ಎಸ್ ಬಿಎಂಜಿಇಸಿ ಸದಸ್ಯರು, ಯುತ್ ಫಾರ್ ಸೇವಾ, ಹಸಿರು ಯೋಧರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.