Adamya Chetana

Adamya Green #450

ಅದಮ್ಯ ಚೇತನದ 450 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 11-08-2024 ರಂದು ಮೈಸೂರಿನ ವಿಜಯನಗರ ನಾಲ್ಕನೇ ಹಂತದ ಬಳಿ ಇರುವ ಎಸ್‌ ಬಿ ಐ ಆಫೀಸರ್ಸ್ ಲೇಔಟ್ ನಲ್ಲಿ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ, ಸುಮಾರು 100 ಗಿಡಗಳನ್ನು ನೆಡಲಾಯಿತು.
ಜಿ. ಎಸ್.ಎಸ್ ಸಂಸ್ಥೆಯ ಶ್ರೀಹರಿದ್ವಾರಕನಾಥ, ಮೈಸೂರು ಸರಕಾರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಜಾನನ ಹೆಗಡೆ, ಪ್ರಾಧ್ಯಾಪಕ ಶ್ರೀ ಶ್ರೀನಿವಾಸ, ಬಿಜೆಪಿ ಕಾರ್ಯಕರ್ತ ಶ್ರೀ ಗೋಪಾಲ್ ರಾವ್, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಅರುಣ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಖಜಾಂಚಿ ಶ್ರೀ ವೆಂಕಟೇಶ್, ಎಸ್ ಬಿ ಐ ಎಂ.ಜಿ. ಎಂ ಶ್ರೀ ಗುರುಪ್ರಸಾದ್, ಎಸ್ ಬಿ ಐ ಆಫೀಸಸ್ ಲೇಔಟ್ ನಿವಾಸಿಗಳು ಮತ್ತು ಅದಮ್ಯ ಚೇತನರ ಸದಸ್ಯರು ಭಾಗವಹಿಸಿದ್ದರು.