2024 ಆಗಸ್ಟ್ 18 ರಂದು, ಅದಮ್ಯ ಚೇತನ ಸಂಸ್ಥೆಯ ನಿರಂತರ ಕಾರ್ಯಕ್ರಮವಾದ “ಹಸಿರು ಭಾನುವಾರ”ದ 451 ನೇ ಕಾರ್ಯಕ್ರಮವು ಬೆಂಗಳೂರಿನ ಆವಲಹಳ್ಳಿ-ಅಂಜನಾಪುರ ಕೆರೆ, ನಂದಿ ಗಾರ್ಡನ್ ಅಪಾರ್ಟ್‌ಮೆಂಟ್ ಪಕ್ಕದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಇಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಹೊಂಗೆ, ಕಾಡು ಬಾದಾಮಿ, ಕದಂಬ ಮತ್ತು ಮಹಾಗಣಿ ಮುಂತಾದ 30 ಸಸಿಗಳನ್ನು ನೆಟ್ಟು, ನೀರು ಹಾಕಲಾಯಿತು.
ಈ ಸಂದರ್ಭದಲ್ಲಿ, ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ನಂದಿ ಗಾರ್ಡನ್ ನಿವಾಸಿಗಳು, ಹಸಿರು ಯೋಧರು ಹಾಗೂ ಸ್ಥಳೀಯರು ಭಾಗಿಯಾಗಿದ್ದರು.