Adamya Green #458
ಅಕ್ಟೊಬರ್ 06 ರಂದು, ಕೃಷ್ಣರಾಜಪುರದಲ್ಲಿ ಸುವರ್ಣಭಾರತಿ – ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರುಗಳ 50 ನೇ ವರ್ಷದ ಸನ್ಯಾಸ ದೀಕ್ಷೆಯ ನಿಮಿತ್ತ, ಅದಮ್ಯ ಚೇತನ ಸಂಸ್ಥೆಯ ‘ಹಸಿರು ಭಾನುವಾರ’ದ 458 ನೇ ಕಾರ್ಯಕ್ರಮವು ಬೆಂಗಳೂರಿನ ರಾಂಪುರದ ಹೊಸಕೋಟೆ ರಸ್ತೆಯ ಪಟಾಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಈ ಮಹತ್ವದ ಕಾರ್ಯಕ್ರಮದಲ್ಲಿ, ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅನುಜ್ಞೆ ಯಂತೆ ರುದ್ರಾಕ್ಷಿ, ಕದಂಬ, ಅತ್ತಿ, ಕರವೀರ, ಸೀತಾ ಅಶೋಕ, ಪಾರಿಜಾತ, ನೇರಳೆ, ಪನ್ನೇರಳೆ, ಹಾಗೂ ಆಲ ಇತ್ಯಾದಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶಾಸಕಿ ಮಂಜುಳಾ ಲಿಂಬಾವಳಿ, ಶ್ರೀಮಠದ ಪ್ರತಿನಿಧಿಗಳು, ಶ್ರೀ ನಟರಾಜ್, ಶ್ರೀ ಪಾಪಣ್ಣ, ಅದಮ್ಯ ಚೇತನದ ಸಕ್ರಿಯ ಕಾರ್ಯಕರ್ತರಾದ ಶ್ರೀ ಪ್ರಕಾಶ ಎನ್, ಶ್ರೀ ಶ್ರೀಧರ್ ಭಟ್ ಹಾಗೂ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮತ್ತಿತರ ಪ್ರಮುಖರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.