Adamya Chetana

Adamya Green #463

2024ರ ನವೆಂಬರ್ 10 ರಂದು, ಚಿಂತಾಮಣಿಯ NR ಎಕ್ಸಟೆನ್ಶನ್ ಬಳಿ ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 463ನೇ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಆವರಣದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರು ಹಾಕುವ ಮೂಲಕ ಪರಿಸರದ ಹಸಿರನ್ನು ಕಾಪಾಡುವ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.