Adamya Chetana

Adamya Green #464

ಬೆಂಗಳೂರಿನ ಯಾರಬ್ ನಗರದಲ್ಲಿರುವ ಬಿ.ಎಸ್.ಕೆ. 2ನೇ ಹಂತದ ಸರಕಾರಿ ಉರ್ದು ಪ್ರಾಥಮಿಕ ಪ್ರೌಢಶಾಲೆಯ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 464ನೇ ಕಾರ್ಯಕ್ರವು 2024ರ ನವೆಂಬರ್ 17 ರಂದು ಯಶಸ್ವಿಯಾಗಿ ಜರಗಿತು.
ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಪರಿಸರ ಕಾಳಜಿಯಲ್ಲಿ ಭಾಗವಹಿಸಿರುವುದು ವಿಶೇಷ. ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಹಲವಾರು ಜಾತಿಯ ಸಸಿಗಳನ್ನು ನೆಡುವ ಮೂಲಕ, ಪರಿಸರ ಸ್ನೇಹಿ ಪರಿಸರವನ್ನು ರೂಪಿಸಲು ಪ್ರೇರಣೆ ನೀಡಲಾಯಿತು. ಪ್ರತಿಯೊಂದು ಗಿಡಕ್ಕೂ ನೀರು ಹಾಕಿ, ಮುಂದಿನ ತಲೆಮಾರಿಗಾಗಿ ಹಸಿರಿನ ದಾರಿ ಕಲ್ಪಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದರು.
ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.