Adamya Chetana

Adamya Green #466

ಡಿಸೆಂಬರ್ 01 ರಂದು ಅದಮ್ಯ ಚೇತನದ 466ನೇ ಹಸಿರು ಭಾನುವಾರದ ಕಾರ್ಯಕ್ರಮವು ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಬಯೋ-ಪಾರ್ಕ್-1, NSS ಭವನದ ಹಿಂಭಾಗದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ 6 ರಾಜ್ಯಗಳಿಂದ 250ಕ್ಕೂ ಹೆಚ್ಚು NSS ವಿದ್ಯಾರ್ಥಿಗಳು, CRPF, BSF ಹಾಗೂ ವನವಾಸಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಡಾ. ತೇಜಸ್ವಿನಿ ಅನಂತಕುಮಾರ್ ಅವರು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದರು. ಅಲ್ಲದೆ, ಸಮಾಜದಲ್ಲಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತನ್ನ ಪಾಲು ಹೇಗೆ ವಹಿಸಬೇಕು ಎಂಬುದನ್ನು ಕೂಡ ಕಾರ್ಯಪ್ರದರ್ಶನದ ಮೂಲಕ ನಿರೂಪಿಸಿದರು.

ಈ ಕಾರ್ಯಕ್ರಮವು ಪರಿಸರ ಅರಿವು ಮತ್ತು ಸಾಮಾಜಿಕ ಕಳಕಳಿಯ ಮಹತ್ವವನ್ನು ಪ್ರತಿಪಾದಿಸಿ, ಎಲ್ಲರಿಗೂ ಪ್ರೇರಣೆಯಾದದ್ದು ವಿಶೇಷ.