Adamya Green #468
ಡಿಸೆಂಬರ್ 15 ರಂದು ಅದಮ್ಯ ಚೇತನದ 468ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ದೀಪಾಂಜಲಿ ನಗರದ ಶ್ರೀ ಗುರು ಶಾಂತಾನಂದ ಪ್ರೌಢಶಾಲೆ, ಶ್ರೀ ಸಿದ್ಧಾರೂಢ ಆಶ್ರಮದ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.
ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಮತ್ತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಕಾರ್ಯಕ್ರಮವು ಹಸಿರು ವಾತಾವರಣ ಸೃಷ್ಟಿಸಲು ಪ್ರೇರಣೆ ನೀಡಿದ್ದು, ಪರಿಸರ ಸ್ವಚ್ಛತಾ ಕಾರ್ಯಗಳ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮಹತ್ವದ ಹೆಜ್ಜೆಯಾಯಿತು.
ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ್ ಅವರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.