Adamya Green #470
ದಿನಾಂಕ 29.12.24 ರಂದು, ಅದಮ್ಯ ಚೇತನದ 470ನೇ ಹಸಿರು ಭಾನುವಾರ ಕಾರ್ಯಕ್ರಮವು ಸಪ್ತಗಿರಿ ಲೇ ಔಟ್ ನಲ್ಲಿ ಯಶಸ್ವಿಯಾಗಿ ಜರಗಿತು. ಎಂದಿನಂತೆ ಅಲ್ಲಿಯ ಸ್ಥಳವನ್ನು ಸ್ವಚ್ಛ ಮಾಡಿ, ಒಟ್ಟು 10 ಗಿಡಗಳನ್ನು ನೆಡಲಾಯಿತು.
ಅದಮ್ಯ ಚೇತನದ ಸ್ವಯಂಸೇವಕರಾದ ಶ್ರೀ ಮಾಧವ ರಾವ್ ತಾಳಿಕೋಟೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿದರು. ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅದಮ್ಯ ಚೇತನ ಸಂಸ್ಥೆಯ ಕಾರ್ಯಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಗಳಿಗೆ ನೀಡುತ್ತಿರುವ ಆದರ್ಶವಾದ ಕೊಡುಗೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ನಂತರ, ಶ್ರೀ ಧ್ರುವ ಅವರು ‘ಪ್ಲೇಟ್ ಬ್ಯಾಂಕ್’ ಯೋಜನೆಯ ಮಹತ್ವವನ್ನು ವಿವರಿಸಿ, ಆಹಾರ ವ್ಯರ್ಥತೆಯನ್ನು ತಡೆಯಲು ಮತ್ತು ಬಡವರಿಗೆ ಆಹಾರ ಪೂರೈಸಲು ಕೈಗೊಂಡ ಪ್ರಯತ್ನಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಜೊತೆಗೆ, ವಾಯುಮಾಲಿನ್ಯ ನಿಯಂತ್ರಣದ ಅಗತ್ಯತೆ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಪರಿಸರ ಸ್ನೇಹಿ ಜೀವನ ಶೈಲಿ ಮತ್ತು ಮಾನವೀಯತೆ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಶ್ರೀ ನಾಗರಾಜಪ್ಪ, ಶ್ರೀ ಅಚ್ಯುತ್ ರಾವ್, ಶ್ರೀಮತಿ ಅಂಜು, ಶ್ರೀ ರವಿಕುಮಾರ್, ಶ್ರೀಮತಿ ಪ್ರತಿಮಾ, ಶ್ರೀ ಸುಭಾಷ್, ವಿವಿಧ ಕಾಲೇಜು ವಿದ್ಯಾರ್ಥಿಗಳು, ಇತರ ಸಹೋದ್ಯೋಗಿಗಳು, ಅದಮ್ಯ ಚೇತನದ ಸ್ವಯಂಸೇವಕರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.