Adamya Green #483
ಯುಗಾದಿ ವಿಶ್ವಾವಸು ಸಂವತ್ಸರದ ವಿಶೇಷ ಅಂಗವಾಗಿ 483ನೇ ಹಸಿರು ಭಾನುವಾರ
ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗೆ ಶುದ್ಧ ಗಾಳಿ, ನೀರು ಹಾಗೂ ಸಮೃದ್ಧ ಪರಿಸರವನ್ನು ನೀಡುವ ಉದ್ದೇಶದಿಂದ ಪ್ರಾರಂಭವಾದ ಅದಮ್ಯ ಚೇತನದ 483ನೇ “ಹಸಿರು ಭಾನುವಾರ” ಕಾರ್ಯಕ್ರಮವು ಅದಮ್ಯ ಚೇತನದ ಎದುರು ಇರುವ ಮಗಜಿ ಕಾರ್ತಿಕ್ ಕಲ್ಯಾಣ ಮಂಟಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಶ್ರೀ ಅನಂತಕುಮಾರ್ ಅವರ ಕನಸು ಮತ್ತು ಅದಮ್ಯ ಚೇತನದ ದೃಢ ಸಂಕಲ್ಪದಿಂದ ಪ್ರಾರಂಭವಾದ ಈ ಕಾರ್ಯಕ್ರಮ, ಸಾವಿರಾರು ಪರಿಸರ ಪ್ರೇಮಿಗಳ ಸಹಕಾರದಿಂದ ಯಶಸ್ಸಿನತ್ತ ಸಾಗುತ್ತಿದೆ. ಈ ಅಭಿಯಾನ ಕೇವಲ ಗಿಡಗಳನ್ನು ನೆಡುವ ಕಾರ್ಯವಷ್ಟೇ ಅಲ್ಲ, ಇದು ಪರಿಸರ ಪ್ರಜ್ಞೆಯನ್ನು ಬೆಳೆಸುವ, ಸಮುದಾಯದಲ್ಲಿ ಹಸಿರು ಕ್ರಾಂತಿಯನ್ನು ತರುವ ಸಮಗ್ರ ಯೋಜನೆಯಾಗಿದೆ.
ಈ ಸಂದರ್ಭದಲ್ಲಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.