Adamya Chetana

Mid Day Meal
ಮಧ್ಯಾಹ್ನದ ಬಿಸಿಯೂಟ ಯೋಜನೆ

Annapoorna-MidDay Meal Programme

Launched in 2003, mid-day meals programme at Adamya Chetana serves hot, tasty and nutritious meals to over 1,50,000 children every day across Bengaluru, Hubballi, Kalaburgi in Karnataka and Jodhpur in Rajasthan in association with central and state governments. As a result of this program providing good nutrition to children, attendance in the schools has gone up and both overall health and learning outcomes of children in these schools has improved noticeably.

Adamya Chetana Annapoorna kitchen in Bengaluru is completely fossil-fuel free since 2008. Cooking with only renewable, fossil free fuels (produced from waste) saves 60 gas cylinders / 300 litres of Diesel/Petrol every day.

Zero-garbage kitchen: Since 2010, Annapoorna kitchen is a ZERO garbage kitchen. Not even a single kg of garbage is put out in Municipality bins. This highly successful project has inspired hundreds of other kitchens in Bengaluru to go garbage-free.

ಅನ್ನಪೂರ್ಣ : ಮಧ್ಯಾಹ್ನದ ಬಿಸಿಯೂಟ ಯೋಜನೆ

೨೦೦೩ರಲ್ಲಿ ಆರಂಭವಾದ ಅನ್ನಪೂರ್ಣ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿನಿತ್ಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರ್ ಅಡುಗೆ ಕೇಂದ್ರಗಳಿಂದ ಒಟ್ಟು ೧,೫೦,೦೦೦ ಮಕ್ಕಳಿಗೆ ಪ್ರತಿ ಮಧ್ಯಾಹ್ನ ಶುಚಿರುಚಿಯಾದ ಪೌಷ್ಟಿಕ ಬಿಸಿಯೂಟವನ್ನು ಸರಬರಾಜು ಮಾಡುತ್ತಿದೆ. ಈ ಯೋಜನೆಯಿಂದಾಗಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿದ್ದು ಮಕ್ಕಳ ಆರೋಗ್ಯದಲ್ಲಿ ಮತ್ತು ಕಲಿಕೆಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ.

ಅನ್ನಪೂರ್ಣ ಅಡುಗೆ ಕೇಂದ್ರದಲ್ಲಿ ಪಳೆಯುಳಿಕೆ ಇಂಧನದ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ೨೦೦೮ ರಿಂದ ಪ್ರತಿದಿನ ೬೦ ಸಿಲಿಂಡರ್ / ೩೦೦ ಲೀನಷ್ಟು ಡೀಸೆಲ್/ಪೇಟ್ರೋಲ್ ಉಪಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಕಸವನ್ನೇ ಇಂಧನವನ್ನಾಗಿ ಬಳಸುತ್ತಾ, ಪೂರ್ತಿಯಾಗಿ ಮರು ಉತ್ಪಾದಿಸಬಲ್ಲ ಪಳೆಯುಳಿಕೆ ರಹಿತ ಇಂಧನದಿಂದ ಅಡುಗೆ ತಯಾರಿಸಲಾಗುತ್ತಿದೆ. ಕಸರಹಿತ ಅಡುಗೆ ಮನೆ : ೨೦೧೦ರಿಂದ ಯಾವುದೇ ಕಸವನ್ನು ಮಹಾನಗರ ಪಾಲಿಕೆಗೆ ಕೊಡದೇ,ಸಂಪೂರ್ಣ ಕಸರಹಿತ ಅಡುಗೆಮನೆಯಾಗಿರುವುದು ಅದಮ್ಯ ಚೇತನದ ಹೆಗ್ಗಳಿಕೆ. ಯಶಸ್ವಿ ಶೂನ್ಯ ತ್ಯಾಜ್ಯ ಅಡುಗೆ ಮನೆಯ ಪ್ರಯೋಗದಿಂದಾಗಿ ಬೆಂಗಳೂರಿನಲ್ಲಿ ನೂರಾರು ಅಡುಗೆ ಮನೆಗಳನ್ನು ಶೂನ್ಯ ತ್ಯಾಜ್ಯ ಅಡುಗೆ ಮನೆಯನ್ನಾಗಿಸಲು ಸಾಧ್ಯವಾಗಿದೆ.