Adamya Chetana

Seva Ustav
ಸೇವಾಉತ್ಸವ

Adamya Chetana Seva Utsava:

With a focus on culture and service, this Seva Utsava ushers in each new year in a novel and innovative way with thousands collectively singing Vande Mataram and making a public commitment to serve the nation and the society. Various theme based competitions, cultural programs, blood donation camp, grand exhibitions by social service organizations, etc. are organized. The Utsava provides an opportunity for display of craftsmanship, ways to reuse/recycle and children’s talent. It also provides a platform for nation building by increasing awareness about sustainability towards a greater and greener Bharat. This Utsava is being organised every year in association with Kannada and Culture Department and has become a model Utsava. Many national and state level leaders join this Seva Utsava.

ಈ ಉತ್ಸವವು ಸಂಸ್ಕೃತಿ-ಸೇವೆ-ಸ೦ಕಲ್ಪದೊ೦ದಿಗೆ ವಿನೂತನ ರೀತಿಯಲ್ಲಿ ಹೊಸ ವರ್ಷಾಚರಣೆ, ವಿವಿಧ ಸ್ಪರ್ಧೆಗಳು, ರಕ್ತದಾನ ಶಿಬಿರ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಸೇವಾನಿರತ ಸ್ವಯಂ ಸೇವಾ ಸಂಸ್ಥೆಗಳ ಬೃಹತ್ ಪ್ರದರ್ಶನ, ಕರಕುಶಲತೆ, ಕಸದಿಂದ ರಸ, ಮಕ್ಕಳ ಪ್ರತಿಭೆಗೆ ಮುಕ್ತ ಅವಕಾಶವನ್ನು ಕಲ್ಪಿಸುವ ವೇದಿಕೆಯಾಗಿದೆ. ಎಲ್ಲರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿ ಭವ್ಯ ಮತ್ತು ಹಸಿರು ಭಾರತ ಕಟ್ಟುವ ಒಂದು ಬೃಹತ್ ವೇದಿಕೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸುತ್ತ ಬಂದಿರುವ ಈ ಉತ್ಸವ ಮಾದರಿ ಉತ್ಸವವಾಗಿ ರೂಪುಗೊಂಡಿದೆ. ಹೊಸ ವರ್ಷದ ಪ್ರಾರಂಭದಲ್ಲಿ ಸಾವಿರಾರು ಕಂಠಗಳಿAದ ವಂದೇ ಮಾತರಂ ಗಾಯನ ಹಾಗು ದೇಶ, ಸಮಾಜಕ್ಕಾಗಿ ಸಂಕಲ್ಪ ಮಾಡುವುದು- ಈ ಉತ್ಸವದ ವಿಶೇಷ. ಪ್ರತಿ ವರ್ಷವೂ ಸೇವಾಉತ್ಸವದಲ್ಲಿ ದೇಶದ, ರಾಜ್ಯದ ಗಣ್ಯಾತಿ ಗಣ್ಯರು ಭಾಗವಹಿಸುತ್ತಾರೆ.