Adamya Chetana

Adamya Green #486

ಬೆಂಗಳೂರಿನ ಗೋಣಿಘಟ್ಟಪುರದ ಕೆರೆಯ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ 486ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಗಿಡ ನೆಡುವಿಕೆ, ಪರಿಸರ ಶುದ್ಧೀಕರಣ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದವು. ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಅದಮ್ಯ ಚೇತನ, ಈ ಮೂಲಕ ಮಾಲಿನ್ಯ ಕಡಿಮೆ ಮಾಡುವ ಹಾಗೂ ಸಸ್ಯವೈವಿಧ್ಯ ಕಾಪಾಡುವ ಪ್ರಾಮಾಣಿಕ ಯತ್ನವನ್ನು ಮುಂದುವರೆಸುತ್ತಿದೆ.

ಕಾರ್ಯಕ್ರಮದಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದ್ದರು.