Adamya Chetana

Adamya Green #488

“ಅದಮ್ಯ ಚೇತನದ 488ನೇ ಹಸಿರು ಭಾನುವಾರ ಕಾರ್ಯಕ್ರಮ”

ಸೇವೆಯ ಮೂಲಕ ಸಮಾಜಮುಖಿ ಬೆಳವಣಿಗೆಗೆ ಶ್ರದ್ಧೆ ಸಲ್ಲಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಡೇರಹಳ್ಳಿ, ರಾಮನಗರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ 488ನೇ ಹಸಿರು ಭಾನುವಾರ ಕಾರ್ಯಕ್ರಮವು ರಾಮನಗರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ NSS ವಿದ್ಯಾರ್ಥಿಗಳೇ ಮನೆಯಿಂದ ತಲಾ 2 ಕೆ.ಜಿ ಕೊಟ್ಟಿಗೆ ಗೊಬ್ಬರ ತಂದು ಗಿಡಗಳನ್ನು ನೆಡುವ ಮೂಲಕ ಹಸಿರು ಸಂರಕ್ಷಣೆಗೆ ಹೆಜ್ಜೆಯನ್ನು ಇಟ್ಟಿದ್ದಾರೆ.

ಈ ಸಂದರ್ಭದಲ್ಲಿ, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.