498ನೇ ಹಸಿರು ಭಾನುವಾರದ ಸಂಭ್ರಮ! 🌱 “ಮನೆಗೊಂದು ಮರ, ಊರಿಗೊಂದು ವನ” ಎಂಬ ಧ್ಯೇಯವಾಕ್ಯದೊಂದಿಗೆ 498ನೇ ಹಸಿರು ಭಾನುವಾರ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು (ಎಸ್.ಜೆ.ಪಿ), ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಪವಿತ್ರ ಕಾರ್ಯದಲ್ಲಿ ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಹಲವಾರು ಪರಿಸರ ಪ್ರೇಮಿಗಳು ಪಾಲ್ಗೊಂಡು ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ತೆಗೆದುಕೊಂಡರು.