Adamya Chetana

Adamya Green #501

ಅದಮ್ಯ ಚೇತನದ 501ನೇ ಹಸಿರು ಭಾನುವಾರ – ಹಸಿರಿನ ಇತಿಹಾಸದಲ್ಲಿ ಇನ್ನೊಂದು ಮೈಲಿಗಲ್ಲು!

ಬೆಂಗಳೂರಿನ ಉತ್ತರಹಳ್ಳಿ ಹೋಬಳಿಯ ಶ್ರೀ ಶಾರದಾ ಪೀಠಂ, ಶೃಂಗೇರಿ ಸಂಸ್ಥೆಯ ಜ್ಞಾನಕೇಂದ್ರ ಆವರಣದಲ್ಲಿ ಅದಮ್ಯ ಚೇತನದ 501ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಈ ಐತಿಹಾಸಿಕ ದಿನದಂದು 500ಕ್ಕೂ ಹೆಚ್ಚು ಹಸಿರು ಯೋಧರು 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಶ್ರದ್ಧಾಭರಿತ ಹೆಜ್ಜೆ ಇಟ್ಟರು. ಇದು ಹಸಿರನ್ನು ಸಿರಿಯಾಗಿಸುವ ಹಾದಿಯಲ್ಲಿನ ಮಹತ್ವದ ತಿರುವು, ಇನ್ನೂ ಹಸಿರಾದ ಕನಸುಗಳತ್ತ ಕರೆದುಕೊಂಡು ಹೋಗುವ ಪ್ರೇರಣಾದಾಯಕ ಆರಂಭ.

ಭವಿಷ್ಯದ ಪೀಳಿಗೆಗಳಿಗೆ ಸುಸ್ಥಿರ, ಆರೋಗ್ಯಪೂರ್ಣ ಪರಿಸರವನ್ನು ಕಲ್ಪಿಸುವ ಕನಸಿನಿಂದ ಆರಂಭವಾದ ಈ ಹಸಿರು ಚಳವಳಿ, ಈಗ ಸಾವಿರಾರು ಹಸಿರು ಮನಸ್ಸುಗಳನ್ನು ಬೆಳೆಸಿದ ಪ್ರೇರಣೆಯಾಗಿ ನಿಂತಿದೆ.

ಈ ಸಂದರ್ಭದಲ್ಲಿ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.