Adamya Chetana

Adamya Green #504

 

ಅದಮ್ಯ ಚೇತನ – 504ನೇ ‘ಹಸಿರು ಭಾನುವಾರ’ದ ಯಶಸ್ವಿ ಸಂಭ್ರಮ

ಅದಮ್ಯ ಚೇತನದ ಹಸಿರು ಭಾನುವಾರದ 504ನೇ ಕಾರ್ಯಕ್ರಮವು ಆಗಸ್ಟ್ 24ರಂದು ಕೃಷ್ಣಪ್ಪನಗರ, ಹಾಲನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆ, ಸರ್ಜಾಪುರ ರಸ್ತೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು.

ಪ್ರಕೃತಿ ಸಂರಕ್ಷಣೆ, ಹಸಿರು ಪ್ರಚಾರ ಮತ್ತು ಪರಿಸರ ಸ್ನೇಹಿ ಜೀವನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಅನೇಕ ಪರಿಸರ ಯೋಧರು, ಸ್ವಯಂಸೇವಕರು, ಸ್ಥಳೀಯರು ಒಗ್ಗೂಡಿ ಪಾಲ್ಗೊಂಡರು.

ಸಾಮಾಜಿಕ ಜವಾಬ್ದಾರಿಯೊಂದಿಗೆ ನಡೆಸಿದ ಈ ಹಸಿರು ಕಾರ್ಯದ ಮೂಲಕ ಹತ್ತಾರು ಸಸಿ ನೆಡುವುದರೊಂದಿಗೆ “ಹಸಿರು ಬದುಕು – ನಮ್ಮ ಜವಾಬ್ದಾರಿ” ಎಂಬ ಸಂದೇಶವನ್ನು ಸಮಾಜಕ್ಕೆ ಸಾರಲಾಯಿತು.
ಹಸಿರು ಪರಂಪರೆಯನ್ನು ಪ್ರತಿ ಭಾನುವಾರ ಮುಂದುವರಿಸಲು 505ನೇ ಹಸಿರು ಭಾನುವಾರದಂದು ಮತ್ತೊಮ್ಮೆ ಸೇರೋಣ.