Adamya Chetana

Adamya Green #505

505ನೇ ಹಸಿರು ಭಾನುವಾರ – ಪರಿಸರಕ್ಕಾಗಿ ಒಂದು ಹೆಜ್ಜೆ, ಭವಿಷ್ಯಕ್ಕಾಗಿ ಒಂದು ಸಂಕಲ್ಪ

ಆಗಸ್ಟ್ 31ರಂದು ಬೆಂಗಳೂರಿನ ಸೇಂಟ್ ಜಾನ್ಸ್ ರಸ್ತೆಯ ಬಿ.ಎಂ. ಇಂಗ್ಲಿಷ್ ಶಾಲೆಯ ಆವರಣದಲ್ಲಿ ಅದಮ್ಯ ಚೇತನದ 505ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಪರಿಸರ ಸಂರಕ್ಷಣೆ ಅಗತ್ಯತೆ ಮತ್ತು ಭವಿಷ್ಯದ ಭದ್ರತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಸಿರು ಭಾನುವಾರದಂತಹ ಚಟುವಟಿಕೆಗಳಿಗೆ ನಾವು ಒಟ್ಟಾಗಿ ಕೈ ಜೋಡಿಸೋಣ.

ಪ್ರಕೃತಿಯೊಂದಿಗೆ ಸಹಬಾಳ್ವೆಯನ್ನು ಒತ್ತಿಹೇಳುವ ಈ ಸಾಮಾಜಿಕ ಆಂದೋಲನದಲ್ಲಿ ‘ಹಸಿರು ಯೋಧರು’, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಅನೇಕ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪರಿಸರವನ್ನು ಕಾಪಾಡುವ ನಮ್ಮ ಸಂಕಲ್ಪವನ್ನು ಮುಂದುವರಿಸಿ, ಮುಂದಿನ ವಾರ ನಡೆಯುವ 506ನೇ ಹಸಿರು ಭಾನುವಾರದಲ್ಲಿ ಮತ್ತೆ ಭೇಟಿಯಾಗೋಣ.