Adamya Chetana

Adamya Green #509

ಅದಮ್ಯ ಚೇತನದ 509ನೇ ಹಸಿರು ಭಾನುವಾರ: ಹಸಿರೀಕರಣದ ಮತ್ತೊಂದು ಯಶಸ್ವಿ ಹೆಜ್ಜೆ

ಸೆಪ್ಟೆಂಬರ್ 28, 2025 ರಂದು ಬೆಂಗಳೂರು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ವಾರ್ಡ್, ಪಿಲ್ಲಗಾನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಅದಮ್ಯ ಚೇತನದ 509ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೇರಿತು.
ಈ ವಿಶೇಷ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ನೀಡಿರುವ ಪ್ರಖ್ಯಾತ ಲೇಖಕರು ಸರಸ್ವತಿ ಸಮ್ಮಾನ್, ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಹಸಿರು ಪರಿಸರದ ಅಗತ್ಯತೆ ತಿಳಿಸುವುದರ ಜೊತೆಗೆ, ಜನರಲ್ಲಿ ಪರಿಸರ ಜಾಗೃತಿ ಬೆಳೆಸುವ ಉದ್ದೇಶದಿಂದ ಈ ಸಾರ್ಥಕ ಕಾರ್ಯ ಕೈಗೊಳ್ಳಲಾಯಿತು. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ದಿಟ್ಟ ಸಂಕಲ್ಪದ ಭಾಗವಾಗಿ ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಹಸಿರು ಯೋಧರು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಅನೇಕ ಸ್ವಯಂಸೇವಕರು ಭಾಗವಹಿಸಿದ್ದರು.

ಈ ಕಾರ್ಯದ ಮೂಲಕ ಹಸಿರೀಕರಣದ ಸಂದೇಶ ಮತ್ತಷ್ಟು ಬಲ ಪಡೆದಿದ್ದು, ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆಯ ನಮ್ಮ ಶ್ರದ್ಧೆ ಮತ್ತಷ್ಟು ಗಟ್ಟಿಯಾಗಿದೆ. ಹಸಿರು ಹಾದಿಯಲ್ಲಿ ನಿಮ್ಮ ಹೆಜ್ಜೆಗಳು ನಮ್ಮೊಂದಿಗೆ ನಿರಂತರವಾಗಿರಲಿ.