Adamya Chetana

Adamya Green #510

“ಹಸಿರು ಭಾನುವಾರ, ಅನೇಕ ಗಿಡಗಳು, ಅನಂತ ಪ್ರೇರಣೆ!”

ಅದಮ್ಯ ಚೇತನ ಸಂಸ್ಥೆಯ 510ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಅಕ್ಟೋಬರ್ 5ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಅನಂತವನದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಸುಮಾರು ೧೦೦ ಗಿಡಗಳನ್ನು ಪುನಃ ನೆಡುವ (re-pot) ಕಾರ್ಯ ಕೈಗೊಳ್ಳಲಾಯಿತು. ಈ ಸಮೂಹ ಭಾಗವಹಿಸುವಿಕೆ ಹಸಿರು ಸಂಸ್ಕೃತಿ ಪೀಳಿಗೆಗಳಿಂದ ಪೀಳಿಗೆಗೆ ಸಾಗಬೇಕೆಂಬ ಸಂದೇಶವನ್ನು ಬಲಪಡಿಸಿದೆ. ಪ್ರತೀ ಭಾನುವಾರ ಗಿಡ ನೆಡುವ ಈ ಕಾರ್ಯಕ್ರಮವು ಒಂದು ಜೀವಂತ ಹಸಿರು ಚಳವಳಿಯಾಗಿದ್ದು, ನಮ್ಮ ಪರಿಸರದ ಭವಿಷ್ಯವನ್ನು ಸುಸ್ಥಿರಗೊಳಿಸುವ ನಿರಂತರ ಪ್ರಯತ್ನವಾಗಿದೆ.

ಅದಮ್ಯ ಚೇತನದ ಈ ಪ್ರಯತ್ನವು ಪರಿಸರ ಪ್ರೇಮ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳ ಸಂಕಲನವಾಗಿದ್ದು, ಮುಂದಿನ ಪೀಳಿಗೆಯು ಪ್ರಕೃತಿಯೊಂದಿಗೆ ಶ್ರದ್ಧೆಯಿಂದ ಬದುಕುವ ಸಂಸ್ಕೃತಿಯನ್ನು ಬೆಳೆಸುವ ಪ್ರೇರಣೆಯಾಗಿದೆ.

ಈ ಸಂದರ್ಭದಲ್ಲಿ, ಅದಮ್ಯ ಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತ್ ಕುಮಾರ್, ಅನೇಕ ಹಸಿರು ಯೋಧರು, ಅದಮ್ಯ ಚೇತನದ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿದ್ದರು.